ಅನಾರೋಗ್ಯದ ಕಾರಣ ದೆಹಲಿಗೆ ವಾಪಾಸಾದ ಯುಪಿಎ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ
ಶನಿವಾರ, 24 ಮಾರ್ಚ್ 2018 (07:04 IST)
ನವದೆಹಲಿ : ಯುಪಿಎ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾರ್ಯವೊಂದರ ನಿಮಿತ್ತ ಶಿಮ್ಲಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಸ್ವಸ್ಥಗೊಂಡಿದ್ದು, ವಾಪಾಸು ದೆಹಲಿಗೆ ಕರೆತರಲಾಗಿದೆ.
ಸೋನಿಯಾ ಗಾಂಧಿಯವರು ಶಿಮ್ಲಾದಿಂದ ಸುಮಾರು 15 ಕಿಲೋ ಮೀಟರ್ ದೂರದ ಚರಾಬ್ರಾ ಪ್ರದೇಶದಲ್ಲಿ ಪ್ರಿಯಾಂಕ ಅವರ ನಿರ್ಮಾಣ ಹಂತದ ಮನೆಯನ್ನು ಪರಿಶೀಲಿಸಲು ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಜೊತೆ ಶಿಮ್ಲಾಗೆ ಭೇಟಿ ನೀಡಿದ್ದ ವೇಳೆ ನಿತ್ರಾಣಗೊಂಡು ತೀವ್ರ ಬಳಲಿದ್ದರಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಆದ ಕಾರಣ ಅವರನ್ನು ಕೂಡಲೇ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿ (ಐಜಿಎಂಸಿ) ಗೆ ಕರೆತಂದು ಚಿಕಿತ್ಸೆ ನೀಡುವ ನಿರ್ಧಾರ ಮಾಡಿದ್ದು, ಆದರೆ ಸೋನಿಯಾ ಗಾಂಧಿ ಅವರ ಜೊತೆಗಿದ್ದ ವೈದ್ಯರು ಸೂಚನೆ ಮೇರೆಗೆ ಅವರನ್ನು ದೆಹಲಿಗೆ ಕರೆ ತರಲಾಯಿತು.
ಸೋನಿಯಾ ಗಾಂಧಿ ಅವರ ಆರೋಗ್ಯದ ಕುರಿತು ಶಿಮ್ಲಾದ ಐಜಿಎಂಸಿ ರ ಹಿರಿಯ ವೈದ್ಯರಾದ ಡಾ. ರಮೇಶ್ ಅವರು,’ ಸೋನಿಯಾ ಅವರ ಆರೋಗ್ಯ ಸ್ಥಿರವಾಗಿದೆ. ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ. ಶಿಮ್ಲಾ ಶೀತ ವಾತಾವರಣ ಹಾಗೂ ಮಳೆಯ ಕಾರಣ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ