ಯುಎಸ್ ವೀಸಾ : ಭಾರತೀಯರಿಗೆ ಹೊಸ ನಿಯಮ

ಸೋಮವಾರ, 6 ಫೆಬ್ರವರಿ 2023 (10:14 IST)
ನವದೆಹಲಿ : ಅಮೆರಿಕ ವೀಸಾ ಪಡೆಯಲು ಭಾರತೀಯರು 500 ದಿನಗಳಿಗೂ ಹೆಚ್ಚು ಕಾಲ ಕಾಯುವಂತಿತ್ತು. ಈ ದೀರ್ಘಾವಧಿ ಕಾಯುವಿಕೆಗೆ ಕಡಿವಾಣ ಹಾಕಲು ಅಮೆರಿಕ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.

ಈ ಕುರಿತು ಅಮೆರಿಕ ರಾಯಭಾರ ಕಚೇರಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. “ನೀವು ಮುಂದೆ ಅಂತಾರಾಷ್ಟ್ರೀಯ ಪ್ರಯಾಣ ಮಾಡುವವರಿದ್ದೀರಾ? ಹಾಗಿದ್ರೆ ನೀವು ನಿಮ್ಮ ಸ್ಥಳದಲ್ಲಿನ ಅಮೆರಿಕದ ಎಂಬೆಸಿ ಅಥವಾ ಕಾನ್ಸುಲೇಟ್ನಲ್ಲಿ ವೀಸಾ ಅಪಾಯಿಟ್ಮೆಂಟ್ ಪಡೆಯಲು ಸಾಧ್ಯವಾಗಲಿದೆ.

ಉದಾಹರಣೆಗೆ, ಬ್ಯಾಂಕಾಕ್ನಲ್ಲಿನ ಅಮೆರಿಕದ ಎಂಬೆಸಿಯು ಮುಂಬರುವ ತಿಂಗಳುಗಳಲ್ಲಿ ಥೈಲ್ಯಾಂಡ್ನಲ್ಲಿರುವ ಭಾರತೀಯರಿಗೆ B1, B2 ಅಪಾಯಿಂಟ್ಮೆಂಟ್ ಅವಕಾಶವನ್ನು ತೆರೆಯಲಿದೆ” ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿ ತಿಳಿಸಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ