ವಾಷಿಂಗ್ಟನ್ : ಅಮೆರಿಕದ ದಕ್ಷಿಣ ಕೆರೊಲಿನಾದ ಅಣ್ವಸ್ತ್ರ ತಾಣಗಳ ಮೇಲೆ ಹಾರಾಟ ನಡೆಸುತ್ತಿದ್ದ ಚೀನಾ ನಿಯೋಜಿತ ಬೇಹುಗಾರಿಕಾ ಬಲೂನ್ ಅನ್ನು ಅಮೆರಿಕ ಎಫ್-22 ಫೈಟರ್ ಜೆಟ್ ಹೊಡೆದುರುಳಿಸಿದೆ ಎಂದು ಪೆಂಟಗನ್ (ಅಮೆರಿಕ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ) ತಿಳಿಸಿದೆ.
ಅಮೆರಿಕದ ವಾಯು, ಅಣ್ವಸ್ತ್ರ ಹಾಗೂ ಜಲಮಾರ್ಗಗಳ ಸೂಕ್ಷ್ಮ ಪ್ರದೇಶಗಳಲ್ಲಿ ಹಾರಾಡುತ್ತಿದ್ದ ಬಲೂನ್ ಅನ್ನು ಕ್ಷಿಪಣಿ ದಾಳಿ ಮೂಲಕ ಅಮೆರಿಕ ಹೊಡೆದುರುಳಿಸಿದೆ.
ಬಳಿಕ ಯುಎಸ್ ಅಧ್ಯಕ್ಷ ಜೋ ಬೈಡನ್ ಬಲೂನ್ ಹೊಡೆದುರುಳಿಸಿದ ಪೈಲಟ್ ಅನ್ನು ಅಭಿನಂದಿಸಿದ್ದಾರೆ.
ಬಲೂನ್ ಒಡೆದು ಹಾಕಿದ್ದನ್ನು ಸಮರ್ಥಿಸಿಕೊಂಡಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಇದು ಉದ್ದೇಶಪೂರ್ವಕ ಮತ್ತು ಕಾನೂನುಬದ್ಧ ಕ್ರಮ ಎಂದು ಸ್ಪಷ್ಟಪಡಿಸಿದ್ದಾರೆ.