ಉತ್ತರಪ್ರದೇಶ: ಭಾನುವಾರ ಉತ್ತರ ಪ್ರದೇಶದ ಅಲಿಗಢದಲ್ಲಿ ಲ್ಯಾಂಡಿಂಗ್ ವೇಳೆ ತರಬೇತಿ ವಿಮಾನವೊಂದು ವಿಮಾನ ನಿಲ್ದಾಣದ ಗೋಡೆಗೆ ಅಪ್ಪಳಿಸಿತು.
ಆ ವೇಳೆ ವಿಮಾನದಲ್ಲಿ ಟ್ರೈನಿ ಪೈಲಟ್ ಪರ್ವ್ ಜೈನ್ ಇದ್ದರು. ವಿಮಾನವು ಹಾನಿಗೊಳಗಾಗಿದ್ದರೂ, ಪೈಲಟ್ ಸುರಕ್ಷಿತವಾಗಿ ಹೊರಬಂದರು.
ಪಯೋನಿಯರ್ ಎವಿ ಏವಿಯೇಷನ್ ಕಂಪನಿಗೆ ಸೇರಿದ ವಿಮಾನವು ಧನಿಪುರ ಏರ್‌ಸ್ಟ್ರಿಪ್‌ನಲ್ಲಿ ಹಾರುತ್ತಿತ್ತು. ಮಧ್ಯಾಹ್ನ 3:10ರ ಸುಮಾರಿಗೆ ಪೈಲಟ್ ವಿಮಾನವನ್ನು ಇಳಿಸಲು ಮುಂದಾದಾಗ ವಿಮಾನವು ವಿಮಾನ ನಿಲ್ದಾಣದ ಗಡಿ ಗೋಡೆಗೆ ಡಿಕ್ಕಿ ಹೊಡೆದು ಹಾನಿಗೊಳಗಾಗಿತ್ತು.
ಟ್ರೈನಿ ಪೈಲಟ್ ವಿಮಾನದಿಂದ ಜಿಗಿದು ತನ್ನನ್ನು ತಾನು ರಕ್ಷಿಸಿಕೊಂಡರು. ಘಟನೆ ಕುರಿತು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.