ಲಂಚವಾಗಿ 5ಕೆಜಿ ಬೇಡಿಕೆಯಿಟ್ಟ ಪೊಲೀಸ್ ಕತೆ ಮುಂದೇನಾಯ್ತು ಗೊತ್ತಾ

Sampriya

ಶನಿವಾರ, 10 ಆಗಸ್ಟ್ 2024 (18:37 IST)
Photo Courtesy X
ಉತ್ತರ ಪ್ರದೇಶ: ಲಂಚವಾಗಿ 5ಕೆಜಿ ಆಲೂಗಡ್ಡೆಗೆ ಬೇಡಿಕೆಯಿಟ್ಟ ಸಬ್‌ಇನ್ಸ್‌ಸ್ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ಇನ್ನೂ ಆಲೂಗಡ್ಡೆ ಎಂಬ ಪದವನ್ನು ಪೊಲೀಸ್‌ ಇನ್ಸ್‌ಪೆಕ್ಟರ್ ಅವರು ಲಂಚದ ಕೋಡ್ ಆಗಿ ಬಳಸಿರುವುದು ತನಿಖೆಯಿಂದ ತಿಳಿದುಬಂದಿದೆ.

ಲಂಚ ಕೇಳಿರುವ ಆರೋಪದಡಿಯಲ್ಲಿ ಸಬ್‌ ಇನ್ಸ್‌ಸ್ಪೆಕ್ಟರ್ ರಾಮ್ ಕೃಪಾಲ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ. ಲಂಚ ಕೇಳಿರುವ ಆರೋಪದ ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ.

ಸೌರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ಭವಲ್‌ಪುರ ಚಾಪುನ್ನಾ ಚೌಕಿಯಲ್ಲಿ ನಿಯೋಜನೆಗೊಂಡಿದ್ದ ಸಬ್‌ ಇನ್ಸ್‌ಸ್ಪೆಕ್ಟರ್‌ನನ್ನು ಅಮಾನತುಗೊಳಿಸಿ ಕನೌಜ್ ಎಸ್‌ಪಿ ಅಮಿತ್ ಕುಮಾರ್ ಆನಂದ್ ಆದೇಶ ಹೊರಡಿಸಿದ್ದಾರೆ.

ವೈರಲ್ ಆಡಿಯೋದಲ್ಲಿ, ಆರೋಪಿ ಪೋಲೀಸ್‌ ರೈತರೊಬ್ಬರ ಬಳಿ  5 ಕೆಜಿ "ಆಲೂಗಡ್ಡೆ" ಗಾಗಿ ಕೇಳಿದ್ದು, ಅವರು ಬೇಡಿಕೆಯನ್ನು ಪೂರೈಸಲು ಅಸಮರ್ಥತೆಯನ್ನು ವ್ಯಕ್ತಪಡಿಸುತ್ತಾರೆ ಮತ್ತು ಬದಲಿಗೆ 2 ಕೆಜಿ ನೀಡುತ್ತಾರೆ. ಆಗ ಪೊಲೀಸ್ ಅಧಿಕಾರಿ ಕೋಪಗೊಂಡು ತನ್ನ ಮೂಲ ಬೇಡಿಕೆಯನ್ನು ಒತ್ತಿ ಹೇಳುತ್ತಾನೆ. ನಂತರ ಅಂತಿಮ ಒಪ್ಪಂದವನ್ನು 3 ಕೆ.ಜಿ ಒಪ್ಪಿಕೊಂಡಿದ್ದಾರೆ.

ಕನೌಜ್ ಪೋಲೀಸರು ಎಕ್ಸ್‌ನಲ್ಲಿ ಪೋಸ್ಟ್‌  ಮಾಡಿ,  "ಮೇಲಿನ ಪ್ರಕರಣದಲ್ಲಿ, ಎಸ್‌ಐ ರಾಮಕೃಪಾಲ್ ಅವರನ್ನು 07.08.2024 ರಂದು ತಕ್ಷಣದಿಂದಲೇ ಜಾರಿಗೆ ಬರುವಂತೆ ಕನೌಜ್‌ನ ಪೊಲೀಸ್ ಅಧೀಕ್ಷಕರು ತಪ್ಪಿತಸ್ಥರೆಂದು ಕಂಡುಬಂದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ. ತಕ್ಷಣದ ಪರಿಣಾಮ ಇಲಾಖಾ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ