ನಗರದಾದ್ಯಂತ ಸಾವಿರಕ್ಕೂ ಹೆಚ್ಚಿನ ಮರಗಳು ನೆಲಕ್ಕುರುಳಿವೆ. ಬೆಳಿಗ್ಗಿನಿಂದಲೇ ನಗರದಾದ್ಯಂತ ವಿದ್ಯುತ್‌ನ್ನು ಸ್ಥಗಿತಗೊಳಿಸಲಾಗಿದೆ. ಸಂಜೆ 6 ಗಂಟೆಯವರೆಗೆ ಮನೆಯಿಂದ ಹೊರಬರದಂತೆ ನಗರವಾಸಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ಮುಂಜಾನೆ 9.30ರ ಒಳಗೆ ಕಚೇರಿಗಳಿಗೆ ಹೋದವರು ಮರಳಿ ಮನೆ ಸೇರುವುದು ಹೇಗೆಂಬ ಆತಂಕಕ್ಕೀಡಾಗಿದ್ದಾರೆ.