ದೇಶದ 13ನೇ ಉಪರಾಷ್ಟ್ರಪತಿಯಾಗಿ ವೆಂಕಯ್ಯನಾಯ್ಡು ಆಯ್ಕೆ

ಶನಿವಾರ, 5 ಆಗಸ್ಟ್ 2017 (19:25 IST)
ಉಪರಾಷ್ಟ್ರಪತಿ ಹುದ್ದೆಗಾಗಿ ನಡೆದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾದ ಎಂ.ವೆಂಕಯ್ಯನಾಯ್ಡು ಶೇ.68 ರಷ್ಟು ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
 
ಯುಪಿಎ ಮೈತ್ರಿಕೂಟದ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಶೇ.32 ರಷ್ಟು ಮತಗಳನ್ನು ಪಡೆಯುವ ಮೂಲಕ ಸೋಲನುಭವಿಸಿದ್ದಾರೆ.
 
ಚುನಾವಣೆಯಲ್ಲಿ ವೆಂಕಯ್ಯನಾಯ್ಡು 516 ಮತಗಳನ್ನು ಪಡೆದಿದ್ದರೆ ಎದುರಾಳಿ ಗೋಪಾಲಕೃಷ್ಣ ಗಾಂಧಿ 244 ಮತಗಳನ್ನು ಪಡೆದು ಹಿನ್ನೆಡೆ ಅನುಭವಿಸಿದರು.
 
ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಗೋಪಾಲಕೃಷ್ಣ ಗಾಂಧಿ, ನೂತನ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನು ಅಭಿನಂಧಿಸಿದರು. ವೆಂಕಯ್ಯನಾಯ್ಡು ಅವರ ಫಲಿತಾಂಶ ಹೊರಬರುತ್ತಿದ್ದಂತೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಸೇರಿದಂತೆ ಅನೇಕ ಗಣ್ಯರು ಶುಭಕೋರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ