ಬಿಜೆಪಿ ಸಿಎಂಗೆ ಛೀಮಾರಿ ಹಾಕಿದ ಬಿಜೆಪಿ ಶಾಸಕ

ಮಂಗಳವಾರ, 24 ಅಕ್ಟೋಬರ್ 2017 (19:32 IST)
ರಾಜಸ್ಥಾನದ ಬಿಜೆಪಿಯಲ್ಲಿನ ಬಿಕ್ಕಟ್ಟು ಇದೀಗ ಬಹಿರಂಗಗೊಂಡಿದೆ. ಹಿರಿಯ ಬಿಜೆಪಿ ಶಾಸಕ ಘಾನಶ್ಯಾಮ್ ತಿವಾರಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಉಪಾಧ್ಯಕ್ಷ ಭೈರೋನ್ ಸಿಂಗ್ ಶೇಖಾವತ್ ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಿವಾರಿ ಅವರನ್ನು ಸನ್ಮಾನಿಸಲು ನಿರ್ಧರಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ವಸುಂಧರಾ ರಾಜೇ ಮುಖ್ಯ ಅತಿಥಿಯಾಗಿರುವ ಸಮಾರಂಭದಲ್ಲಿ   ಸನ್ಮಾನ ಸ್ವೀಕರಿಸಲು ಇಷ್ಟಪಡುವುದಿಲ್ಲ. ಸರ್ಕಾರದಲ್ಲಿರುವ ಭ್ರಷ್ಟಾಚಾರದ ವಿಚಾರವನ್ನು ಎತ್ತಿದ ದಿನದಿಂದ ರಾಜೇ ತಮ್ಮ ವಿರುದ್ಧ ವೈಯಕ್ತಿಕವಾಗಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
 
ರಾಜ್ಯದಲ್ಲಿ ಒಂಬತ್ತು ಬಾರಿ ಶಾಸಕರಾಗಿ ಸುದೀರ್ಘ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
 
ಸರಕಾರದ ಅನುಮತಿಯಿಲ್ಲದೇ ನ್ಯಾಯಾಧೀಶರು ಮತ್ತು ಜನಪ್ರತಿನಿಧಿಗಳನ್ನು ತನಿಖೆ ನಡೆಸುವಂತಿಲ್ಲ ಎನ್ನುವ  ರಾಜಸ್ಥಾನ್ ಸರ್ಕಾರದ ವಿವಾದಾತ್ಮಕ ಆದೇಶವನ್ನು ವಿರೋಧಿಸಿ ಬಿಜೆಪಿ ಹಿರಿಯ ನಾಯಕ ತಿವಾರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 
 
ಇದು 'ಕಲಾ ಕನೂನ್' (ಕಪ್ಪು ಕಾನೂನು) ಮತ್ತು ನಾನು ಅದಕ್ಕೆ ವಿರುದ್ಧವಾಗಿದ್ದೇನೆ 'ಎಂದು ಹಿರಿಯ ಬಿಜೆಪಿ ಶಾಸಕ ಅಸೆಂಬ್ಲಿ ಆವರಣದಲ್ಲಿ ತಿಳಿಸಿದ್ದಾರೆ.
 
ಕಾಂಗ್ರೆಸ್ ಶಾಸಕರು ಪ್ರತಿಪಕ್ಷ ನಾಯಕ ರಾಮೇಶ್ವರ್ ದೂಡಿ ನೇತೃತ್ವದಲ್ಲಿ ಕಪ್ಪು ಬ್ಯಾಂಡ್‌ಗಳೊಂದಿಗೆ ತಮ್ಮ ಬಾಯಿಯನ್ನು ಮುಚ್ಚಿ, ಎಂಎಲ್ಎ ಕ್ವಾರ್ಟರ್ಸ್‌ನಿಂದ ಅಸೆಂಬ್ಲಿ ಕಟ್ಟಡದವರೆಗೆ ಪ್ರತಿಭಟನೆ ನಡೆಸಿದರು.
 
ಸರಕಾರದ ಸುಗ್ರೀವಾಜ್ಞೆ ಆದೇಶ ಮತ್ತು ಇದೀಗ ಮಸೂದೆಯನ್ನು ಜಾರಿಗೆ ತರುವ ಉದ್ದೇಶ ನೋಡಿದಲ್ಲಿ ಸ್ಪಷ್ಟವಾಗಿ ಪ್ರಜಾಪ್ರಭುತ್ವಕ್ಕೆ ಗೌರವವಿಲ್ಲ ಮತ್ತು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದು ಸಾಬೀತಾಗಿದೆ ಎಂದು ರಾಮೇಶ್ವರ್ ದೂಡಿ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ