ಮೋದಿ, ಗಾಂಧೀಜಿ, ಯೋಗಿ ಭೋಜ್‌ಪುರಿ ಹಾಡುಗಳಿಗೆ ನರ್ತಿಸುವ ವಿಡಿಯೋ: ಪ್ರಕರಣ ದಾಖಲು

Sampriya

ಬುಧವಾರ, 25 ಸೆಪ್ಟಂಬರ್ 2024 (17:00 IST)
Photo Courtesy X
ನವದೆಹಲಿ: ಮಹಾತ್ಮ ಗಾಂಧೀಜಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ "ಆಕ್ಷೇಪಾರ್ಹ" ವೀಡಿಯೋ ಪೋಸ್ಟ್ ಮಾಡಿದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ತನ್ನನ್ನು ರಾಷ್ಟ್ರೀಯವಾದಿ ನೇಹಾ ಸಿಂಗ್ ರಾಥೋಡ್ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ವೈರಲ್ ವಿಡಿಯೋವನ್ನು ಹಂಚಿಕೊಂಡು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.

"ಉತ್ತರ ಪ್ರದೇಶದ ಜನಪ್ರಿಯ ಮತ್ತು ಯಶಸ್ವಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ರಾಜ್ಯದಲ್ಲಿ ಮಹಿಳೆಯರ ಗೌರವ, ಭದ್ರತೆ ಮತ್ತು ಸಬಲೀಕರಣಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡಿದ್ದಾರೆ. ಕೆಲವು ಅಗ್ಗದ ಬೀದಿ ರೀಲರ್‌ಗಳು ಕೆಲವು ವೀವ್ಸ್‌ಗಾಗಿ  ಯೋಗಿಯನ್ನು ಹೇಗೆ ಬಳಸಬಹುದು ಎಂದು ರಾಥೋರ್ ಪ್ರಶ್ನೆ ಮಾಡಿದ್ದಾರೆ.

ಇದಷ್ಟೇ ಅಲ್ಲ, ಅಗ್ಗದ ಜನಪ್ರಿಯತೆಗಾಗಿ ಪ್ರಧಾನಿ ಮತ್ತು ಮಹಾತ್ಮ ಗಾಂಧಿಯವರ ವೀಡಿಯೊಗಳನ್ನು ಎಡಿಟ್ ಮಾಡಿ ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಾತ್ಮ ಗಾಂಧೀಜಿ, ಮೋದಿ ಮತ್ತು ಆದಿತ್ಯನಾಥ್ ಭೋಜ್‌ಪುರಿ ಹಾಡುಗಳಿಗೆ ನೃತ್ಯ ಮತ್ತು ಹಾಡುವುದನ್ನು ತೋರಿಸುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ