ಕಪ್ಪು ಹಣದ ಕುರಿತು ಪ್ರಧಾನಿ ಮೋದಿಗೆ ವ್ಯಂಗ್ಯ ಮಾಡಿದ ರಾಹುಲ್ ಗಾಂಧಿ

ಶನಿವಾರ, 30 ಜೂನ್ 2018 (13:40 IST)
ನವದೆಹಲಿ : ಕಪ್ಪುಕುಳಗಳ ಸ್ವರ್ಗ ಎಂದೇ ಬಿಂಬಿತವಾಗಿರುವ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಹೊಂದಿರುವ ಹಣದ ಪ್ರಮಾಣ 2017ನೇ ಸಾಲಿನಲ್ಲಿ ಶೇ.50ರಷ್ಟು ಹೆಚ್ಚಾಗಿರುವ ಹಿನ್ನಲೆಯಲ್ಲಿ ಇದೀಗ ರಾಹುಲ್ ಗಾಂಧಿ ಅವರು ಮೋದಿಯವರನ್ನು ಲೇವಡಿ ಮಾಡಿದ್ದಾರೆ.


2014ರಲ್ಲಿ ಮೋದಿ ಹೇಳಿದ್ದರು: ಸ್ವಿಸ್‌ ಬ್ಯಾಂಕುಗಳಿಂದ ಎಲ್ಲ ಕಪ್ಪು ಹಣ ತಂದು ಪ್ರತಿಯೊಬ್ಬರ ಭಾರತೀಯರ ಖಾತೆಗೆ 15 ಲಕ್ಷ ರು. ಹಾಕುವೆ. 2016ರಲ್ಲಿ ಅವರು ಹೇಳಿದ್ದರು: ಕಪ್ಪು ಹಣ ಸಮಸ್ಯೆಯನ್ನು ಅಪನಗದೀಕರಣ ನಿವಾರಿಸಲಿದೆ. 2018ರಲ್ಲಿ ಹೇಳುತ್ತಿದ್ದಾರೆ: ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರ ಠೇವಣಿ ಶೇ.50ರಷ್ಟುಏರಿಕೆಯಾಗಿದೆ. ಅದು ಸಂಪೂರ್ಣ ಬಿಳಿ ಹಣ. ಸ್ವಿಸ್‌ ಬ್ಯಾಂಕಿನಲ್ಲಿ ಕಪ್ಪು ಹಣವೇ ಇಲ್ಲ ಎಂದು ರಾಹುಲ್‌ ಗಾಂಧಿ ಅವರು ಟ್ವೀಟ್‌ ಮಾಡಿ ಮೋದಿ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ