ರೇಪ್ ಕೇಸ್`ನಲ್ಲಿ ದೇರಾ ಮುಖ್ಯಸ್ಥ ದೋಷಿ: ಭುಗಿಲೆದ್ದ ಹಿಂಸಾಚಾರ, 11 ಸಾವು

ಶುಕ್ರವಾರ, 25 ಆಗಸ್ಟ್ 2017 (17:03 IST)
ಸಾಧ್ವಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ದೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ದೋಷಿಯೆಂದು ಪಂಚಕುಲದ ಸಿಬಿಐ ಕೋರ್ಟ್ ತೀರ್ಪು ನೀಡುತ್ತಿದ್ದಂತೆ ಸ್ವಯಂಘೋಷಿತ ದೇವಮಾನವನ ಬೆಂಬಲಿಗರ ಹಿಂಸಾಚಾರ ಭುಗಿಲೆದ್ದಿದೆ.

ಸಿಕ್ಕ ಸಿಕ್ಕ ವಾಹನಗಳು, ಕಟ್ಟಡಗಳ ಮೇಲೆ ದಾಳಿ ನಡೆಸುತ್ತಿದ್ಧಾರೆ. ಸಾರ್ವಜನಿಕರು, ಮಾಧ್ಯಮದವರ ಮೇಲೆ ದಾಳಿ ನಡೆಯುತ್ತಿದೆ. ಘಟನೆಯಲ್ಲಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ ವರದಿಯಾಗಿದೆ. ಐಟಿ ಇಲಾಖೆ, ಕಚೇರಿ, ಪವರ್ ಹೌಸ್ ಸೇರಿದಂತೆ ಎಲ್ಲೆಡೆ ದಾಳಿ ನಡೆದಿದೆ. ಆಸ್ಪತ್ರೆಗಳಿಗೆ ಬರುತ್ತಿರುವ ಗಾಯಾಳುಗಳ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಲೇ ಇದೆ.  ದುಷ್ಕರ್ಮಿಗಳು ದಾಳಿಗೆ ಪೆಟ್ರೋಲ್ ಬಾಂಬ್, ಮಾರಕಾಸ್ತ್ರಗಳನ್ನ ಸಹ ಬಳಸಿದ್ಧಾರೆ.

ಆಂಬ್ಯುಲೆನ್ಸ್`ಗಳ ಮೇಲೂ ಗೂಂಡಾಗಳು ದಾಳಿ ನಡೆಸುತ್ತಿದ್ದಾರೆ. ಹರ್ಯಾಣ ಪಂಜಾಬ್`ನ ಹಲವೆಡೆ ಕರ್ಫ್ಯೂ ವಿಧಿಸಲಾಗಿದೆ. ಪಂಚಕುಲದಲ್ಲಿ ಎಲ್ಐಸಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಅತ್ಯಾಚಾರಿ ರಾಮ್ ರಹೀಮ್ ಸಿಂಗ್`ನನ್ನ ರೋಹ್ಟಕ್`ಗೆ ಕರೆದೊಯ್ಯಲಾಗಿದೆ. ಈ ಮಧ್ಯೆ, ಪಂಜಾಬ್ ಮುಖ್ಯಮಂತ್ರಿಗೆ ಕರೆ ಮಾಡಿರುವ ಕೇಂದ್ರ ಗೃಹ ಸಚಿವರು ಮಾಹಿತಿ ಪಡೆದು ಪ್ರಧಾನಿ ಮೋದಿ ತಿಳಿಸಿದ್ಧಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ