ಡೆಹ್ರಾಡೂನ್ ನಲ್ಲಿ ಭೀಕರ ಪ್ರವಾಹ: ಪ್ರವಾಹದ ಮಧ್ಯೆ ಕಂಬವೇರಿ ನಿಂತ ಯುವಕನ ವೈರಲ್ ವಿಡಿಯೋ

Krishnaveni K

ಮಂಗಳವಾರ, 16 ಸೆಪ್ಟಂಬರ್ 2025 (11:49 IST)
Photo Credit: X
ಉತ್ತರಾಖಂಡ: ಡೆಹ್ರಾಡೂನ್ ಲ್ಲಿ ಮೇಘಸ್ಪೋಟದಿಂದ ಭೀಕರ ಪ್ರವಾಹ ಸ್ಥಿತಿ ಎದುರಾಗಿದ್ದು, ಪ್ರವಾಹದಿಂದ ರಕ್ಷಿಸಿಕೊಳ್ಳಲು ಓರ್ವ  ಯುವಕ ಕಂಬವೇರಿ ಕುಳಿತ ಭೀಕರ ವಿಡಿಯೋವೊಂದು ವೈರಲ್ ಆಗಿದೆ.

ನಿನ್ನೆ ರಾತ್ರಿ ದಿಡೀರ್ ಮೇಘಸ್ಪೋಟದಿಂದ ಡೆಹ್ರಾಡೂನ್ ತಪೋವನ್ ಹಾಗೂ ಸಹಸ್ರಧಾರಾ ಮತ್ತು ಅದೇ ಪ್ರಾಂತ್ಯದ ಐಟಿ ಪಾರ್ಕ್ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ನೋಡ ನೋಡುತ್ತಿದ್ದಂತೇ ಮನೆ, ಕಟ್ಟಡಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ನದಿಯಂತೆ ನೀರು ಉಕ್ಕಿ ಹರಿಯುತ್ತಿದ್ದು ಪ್ರವಾಹದ ನಡುವೆ ತನ್ನನ್ನು ರಕ್ಷಿಸಿಕೊಳ್ಳಲು ಓರ್ವ ಯುವಕ ಕಂಬವೇರಿ ಜೀವ ಕೈಯಲ್ಲಿ ಹಿಡಿದು ನಿಂತಿರುವ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆತನನ್ನು ರಕ್ಷಣಾ ಸಿಬ್ಬಂದಿ ಹರಸಾಹಸ ಪಟ್ಟು ರಕ್ಷಿಸಿದ್ದಾರೆ.

ಜನವಸತಿ ಪ್ರದೇಶಗಳು ನೀರಿನಲ್ಲಿ ಮುಳುಗಿದ್ದು ಜನ ಜೀವನ ಸಂಕಷ್ಟಕ್ಕೀಡಾಗಿದೆ. ಸಾಕಷ್ಟು ಜನರು ಪ್ರವಾಹಕ್ಕೆ ಸಿಲುಕಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ರಕ್ಷಣಾ ಸಿಬ್ಬಂದಿ ಜನರನ್ನು ಸುರಕ್ಷಿತ ಸ್ಥಳಿಗಳಿಗೆ ಸ್ಥಳಾಂತರಿಸುತ್ತಿದ್ದಾರೆ.

A man is stranded on an electric pole in the flooded Tons River near Sudhowala, Dehradun. Rescue operations are currently underway.

Tons River is the largest tributary of the Yamuna River. Origins from the Bandarpunch Mountain/glacier in the Garhwal Himalayas, Joins the Yamuna… pic.twitter.com/V6n0K5IZGc

— Naveen Reddy (@navin_ankampali) September 16, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ