Viral video: ಟ್ರಕ್ ನಡಿ ಸಿಲುಕಿದರೂ ಈ ಮಹಿಳೆಯನ್ನು ದೇವರೇ ಕಾಪಾಡಿದ
ಈ ಘಟನೆ ನಡೆದಿರುವುದು ಕೇರಳದ ಕೋಝಿಕ್ಕೋಡ್ ನಲ್ಲಿ. ಮಹಿಳೆಯೊಬ್ಬರು ಸ್ಕೂಟಿ ಚಲಾಯಿಸಿಕೊಂಡು ಹೋಗುತ್ತಿರುತ್ತಾರೆ. ಅವರ ಮುಂದೆ ಒಂದು ಟ್ರಕ್ ಚಲಿಸುತ್ತಿರುತ್ತದೆ. ಸ್ವಲ್ಪ ಇಳಿಜಾರು ಇರುವ ರಸ್ತೆಯಲ್ಲಿ ಟ್ರಕ್ ನಿಲ್ಲುತ್ತದೆ. ಅದರ ಹಿಂದೆಯೇ ಸ್ಕೂಟಿ ಚಲಾಯಿಸುತ್ತಿದ್ದ ಮಹಿಳೆಯೂ ನಿಲ್ಲುತ್ತಾರೆ.
ಇದ್ದಕ್ಕಿದ್ದಂತೆ ಬ್ರೇಕ್ ಗೆ ಸಿಗದೇ ಟ್ರಕ್ ಹಿಂದಕ್ಕೆ ಚಲಿಸಲು ಆರಂಭಿಸುತ್ತದೆ. ಇದರಿಂದಾಗಿ ಅದರ ಹಿಂದೆಯೇ ಸ್ಕೂಟಿಯಲ್ಲಿ ಕೂತಿದ್ದ ಮಹಿಳೆ ಸ್ಕೂಟಿ ಸಮೇತ ಟ್ರಕ್ ನಡಿಗೆ ಸಿಲುಕುತ್ತಾರೆ.
ಅದೃಷ್ಟವಶಾತ್ ಮಹಿಳೆ ಟ್ರಕ್ ನ ಒಂದು ಬದಿಗೆ ಬಿದ್ದಿದ್ದರಿಂದ ಯಾವುದೇ ಅಪಾಯವಾಗದೇ ಎದ್ದು ನಿಲ್ಲುತ್ತಾರೆ. ಆದರೆ ಅವರ ಸ್ಕೂಟಿ ಮಾತ್ರ ನಜ್ಜುಗುಜ್ಜಾಗುತ್ತದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ದೇವರೇ ಆಕೆಯನ್ನು ಕಾಪಾಡಿದ್ದು ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.