Video: ಪಾಕಿಸ್ತಾನ ಸದೆಬಡಿಯಲು ಸೇನಾ ವಾಹನ ಸಾಗುತ್ತಿದ್ದರೆ ರಸ್ತೆಯಲ್ಲಿ ಜೈಕಾರ ಹಾಕಿದ ಭಾರತೀಯರು

Krishnaveni K

ಶುಕ್ರವಾರ, 9 ಮೇ 2025 (12:08 IST)
Photo Credit: X
ಜಮ್ಮು ಕಾಶ್ಮೀರ: ಪಾಕಿಸ್ತಾನವನ್ನು ಉಡೀಸ್ ಮಾಡಲು ಸೇನಾ ವಾಹನಗಳು ರಸ್ತೆಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊತ್ತು ಸಾಗುತ್ತಿದ್ದರೆ ಇತ್ತ ಭಾರತೀಯರು ರಸ್ತೆ ಬದಿಯಲ್ಲಿ ನಿಂತು ಜೈಕಾರ ಹಾಕಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಿನ್ನೆ ಪಾಕಿಸ್ತಾನ ಭಾರತ ನಾನಾ ನಗರಗಳನ್ನು ಟಾರ್ಗೆಟ್ ಮಾಡಿ ದಾಳಿಗೆ ಮುಂದಾಗಿತ್ತು. ಇದನ್ನು ಭಾರತೀಯ ಸೇನೆ ಯಶಸ್ವಿಯಾಗಿ ಬೆನ್ನಟ್ಟಿತ್ತು. ಪಾಕಿಸ್ತಾನವನ್ನು ಹಿಮ್ಮೆಟ್ಟಿಸಲು ನಮ್ಮ ವೀರ ಯೋಧರು ಹಗಲು-ರಾತ್ರಿಯೆನ್ನದೇ ಕಣ್ಣಲ್ಲಿ ಕಣ್ಣಿಟ್ಟು ದೇಶ ಕಾಯುತ್ತಿದ್ದಾರೆ.

ಈ ನಡುವೆ ಭಾರತೀಯ ಸೇನಾ ವಾಹನದಲ್ಲಿ ಸೈನಿಕರು ಯುದ್ಧ ಪರಿಕರಗಳನ್ನು ಹೊತ್ತು ಓಡಾಡುವ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೇನಾ ವಾಹನ ಹೋಗುತ್ತಿದ್ದರೆ ಅಕ್ಕ ಪಕ್ಕದಲ್ಲಿ ನಿಂತಿದ್ದ ಜನ ಭಾರತ್ ಮಾತಾ ಕೀ ಜೈ ಎಂದು ಜೈಕಾರ ಹಾಕಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

आंखे नम हो गयी !
शेरो की सेना जय हिंद की सेना ! #IndiaPakistanWar #OperationSindoor #IndianArmy #Rajasthan #karachiport #HerHynessXLingling #IndianAirForce #IndianNavyAction pic.twitter.com/CkPorAAf3d

— War News (@INDIANFORCEARMY) May 8, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ