ರಾಯಚೂರು: ಫೋಟೋ ನೆಪದಲ್ಲಿ ಪತಿಯನ್ನು ನದಿಗೆ ತಳ್ಳಿದಳಾ ಪತಿ: ವಿಡಿಯೋ
ರಾಯಚೂರು ಜಿಲ್ಲೆಯ ಗುರ್ಜಾಪುರ ಬ್ರಿಡ್ಜ್ ನಲ್ಲಿ ಘಟನೆ ನಡೆದಿದೆ. ಮಳೆಗಾಲವಾಗಿರುವುದರಿಂದ ನದಿಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ಫೋಟೋ ತೆಗೆಯುವ ನೆಪದಲ್ಲಿ ಪತಿ ಬ್ರಿಡ್ಜ್ ನ ತುದಿಯಲ್ಲಿ ನಿಂತಿದ್ದಾಗ ಪತ್ನಿಯೇ ನದಿಗೆ ತಳ್ಳಿದ್ದಾಳೆ ಎನ್ನಲಾಗಿದೆ.
ನದಿಗೆ ಬಿದ್ದ ಪತಿ ಈಜಿ ಬಂಡೆ ಮೇಲೆ ನಿಂತು ಕಾಪಾಡಿ ಎಂದು ಸ್ಥಳೀಯರ ಮುಂದೆ ಅಂಗಲಾಚಿದ್ದಾನೆ. ವಿಶೇಷವೆಂದರೆ ಪತ್ನಿಯೂ ಸೇತುವೆಯಲ್ಲಿ ನಿಂತು ನೋಡುತ್ತಿದ್ದಳು. ಸ್ಥಳೀಯರು ಪ್ರಶ್ನಿಸಿದಾಗ ನಾನೇನು ಮಾಡಿಲ್ಲ. ಬ್ರಿಡ್ಜ್ ತುದಿಗೆ ನಿಂತು ಫೋಟೋ ತೆಗೆಯಲು ಯತ್ನಿಸಿದಾಗ ಬಿದ್ದರು ಎಂದಿದ್ದಾಳೆ.
ಆದರೆ ಪತಿ ತಾತಪ್ಪ ನನ್ನನ್ನು ಪತ್ನಿಯೇ ತಳ್ಳಿದ್ದಾಳೆ ಎಂದು ಆರೋಪಿಸಿದ್ದಾನೆ. ಕಳೆದ ಏಪ್ರಿಲ್ ನಲ್ಲಿ ಇಬ್ಬರೂ ಮದುವೆಯಾಗಿದ್ದರು. ಆದರೆ ಮದುವೆಯಾದಾಗಿನಿಂದಲೂ ಇಬ್ಬರ ಸಂಸಾರ ಸರಿ ಇರಲಿಲ್ಲ. ವೈಮನಸ್ಯದಿಂದಲೇ ಈ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಪತ್ನಿ ಗದ್ದೆಮ್ಮ ಪತಿಯೇ ಕಾಲು ಜಾರಿ ಬಿದ್ದಿರುವುದಾಗಿ ಹೇಳಿದ್ದಾಳೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.