ಏರ್ ಇಂಡಿಯಾ ಜೊತೆ ವಿಸ್ತಾರಾ ವಿಲೀನ : ಹೂಡಿಕೆಗೆ ಟಾಟಾ ಚಿಂತನೆ

ಬುಧವಾರ, 30 ನವೆಂಬರ್ 2022 (07:12 IST)
ನವದೆಹಲಿ : 2024ರ ಮಾರ್ಚ್ ವೇಳೆಗೆ ಟಾಟಾ ಒಡೆತನದ ಏರ್ ಇಂಡಿಯಾದೊಂದಿಗೆ ವಿಸ್ತಾರಾ ಏರ್ಲೈನ್ಸ್ ಅನ್ನು ವಿಲೀನಗೊಳಿಸುವುದಾಗಿ ಟಾಟಾ ಸಮೂಹ ಅಧಿಕೃತವಾಗಿ ಘೋಷಿಸಿದೆ.

ವಿಸ್ತಾರಾ ವಿಮಾನಯಾನ ಕಂಪನಿಯನ್ನು ಏರ್ ಇಂಡಿಯಾ  ಜೊತೆ ವಿಲೀನಗೊಳಿಸುವ ಕುರಿತು ಟಾಟಾ ಸಮೂಹದ ಜೊತೆ ಗೌಪ್ಯ ಮಾತುಕತೆ ನಡೆಯುತ್ತಿದೆ ಎಂದು ಸಿಂಗಾಪುರ ಏರ್ಲೈನ್ಸ್ ಕಳೆದ ಅಕ್ಟೋಬರ್ನಲ್ಲೇ ತಿಳಿಸಿತ್ತು. 

ಪ್ರಸ್ತುತ ವಿಸ್ತಾರಾದಲ್ಲಿ ಟಾಟಾ ಸಮೂಹವು ಶೇ.51ರಷ್ಟು ಪಾಲು ಹೊಂದಿದೆ. ಉಳಿದ ಶೇ.49 ಷೇರು ಸಿಂಗಾಪುರ ಏರ್ಲೈನ್ಸ್ನಲ್ಲೇ ಇದೆ.

ಇದೀಗ ವಹಿವಾಟಿನ ಭಾಗವಾಗಿ ಎಸ್ಐಎ, ಏರ್ ಇಂಡಿಯಾದಲ್ಲಿ 2 ಸಾವಿರ ಕೋಟಿಗೂ ಅಧಿಕ ಹಣ ಹೂಡಿಕೆ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 

ಈಗಾಗಲೇ ಏರ್ ಇಂಡಿಯಾದ ಪೂರ್ಣ ಮಾಲೀಕತ್ವ ಹೊಂದಿರುವ ಟಾಟಾ ಸಮೂಹ, ಏರ್ಏಷ್ಯಾ ಇಂಡಿಯಾ ಕಂಪನಿಯಲ್ಲಿ ಶೇ 83.67ರಷ್ಟು ಪಾಲು ಹೊಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ