ಅಮ್ಮ ಸದಾ ನನ್ನ ಹೃದಯದಲ್ಲಿ ನೆಲೆಸಿರುತ್ತಾಳೆ: ಶಶಿಕಲಾ ನಟರಾಜ್
ಶನಿವಾರ, 31 ಡಿಸೆಂಬರ್ 2016 (13:55 IST)
ಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ವಿ.ಕೆ.ಶಶಿಕಲಾ, ಅಮ್ಮ ಸದಾ ನನ್ನ ಹೃದಯದಲ್ಲಿ ನೆಲೆಸಿರುತ್ತಾಳೆ ಎಂದು ಮೊದಲ ಬಾರಿಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಸಾವಿರಾರು ಬೆಂಬಲಿಗರು ಚಿನ್ನಮ್ಮಗೆ ಶುಭವಾಗಲಿ ಎನ್ನುವ ಘೋಷಣೆಗಳಿಂದ ಪ್ರೇರಿತರಾದ ಶಶಿಕಲಾ, ನಗರದ ರಾಯಪೇಟೆಯಲ್ಲಿರುವ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ, ಅಮ್ಮ ಜಯಲಲಿತಾ ಸದಾ ನನ್ನ ಜೊತೆಯಿರುತ್ತಾರೆ ಎಂದು ತಿಳಿಸಿದ್ದಾರೆ.
ಕಳೆದ 33 ವರ್ಷಗಳಿಂದ ಜಯಲಲಿತಾ ಅವರೊಂದಿಗೆ ಪಕ್ಷದ ಸಭೆಗಳಲ್ಲಿ ಪಾಲ್ಗೊಂಡಿದ್ದೇನೆ. ಮುಂದೆ ಹಲವಾರು ದಶಕಗಳ ಕಾಲ ಎಐಎಡಿಎಂಕೆ ಪಕ್ಷ ರಾಜ್ಯದಲ್ಲಿ ಅಧಿಕಾರ ನಡೆಸಲಿದೆ ಎಂದು ಭವಿಷ್ಯ ನುಡಿದರು.
ಭಾರಿ ಬಿಗಿ ಭದ್ರತೆಯೊಂದಿಗೆ ಎಐಎಡಿಎಂಕೆ ಕೇಂದ್ರ ಕಚೇರಿಗೆ ಆಗಮಿಸಿದ ಶಶಿಕಲಾ, ಮೊದಲಿಗೆ ಪಕ್ಷದ ಸಂಸ್ಥಾಪಕ ಎಂಜಿಆರ್ ಪ್ರತಿಮೆಗೆ ಹಾರ ಹಾಕಿ ನಮಿಸಿದರು. ನಂತರ ಜಯಲಲಿತಾ ಅವರ ಪ್ರತಿಮೆಗೆ ಶೃದ್ಧಾಂಜಲಿ ಅರ್ಪಿಸಿದರು
ಪೋಯಿಸ್ ಗಾರ್ಡನ್‌ನಿಂದ ರಾಯಪೇಟೆಯ ಕಚೇರಿಯವರೆಗೂ ಪಕ್ಷದ ಕಾರ್ಯಕರ್ತರು ಸಾಲು ಸಾಲಾಗಿ ನಿಂತು ಶಶಿಕಲಾ ಅವರಿಗೆ ಶುಭಕೋರಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.