ಮೋದಿಗೆ ರಾಖಿ ಕಟ್ಟುತ್ತಿರುವ ಸಹೋದರಿಯರ ಬೇಡಿಕೆ ಏನು?

ಗುರುವಾರ, 18 ಆಗಸ್ಟ್ 2016 (11:07 IST)
ಇಂದು ಸಹೋದರ- ಸಹೋದರಿ ಬಾಂಧವ್ಯದ ಪವಿತ್ರ ಹಬ್ಬ ರಕ್ಷಾಬಂಧನವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಪ್ರತಿವರ್ಷದಂತೆ ಈ ಬಾರಿಯೂ ಪ್ರಧಾನಿ ಮೋದಿಗೆ ರಾಖಿ ಕಟ್ಟಲಿದ್ದಾರೆ ಬೃಂದಾವನ ಮತ್ತು ವಾರಣಾಸಿಯ ವಿಧವಾ ಮಹಿಳೆಯರು.

ಬೃಂದಾವನ ಮತ್ತು ವಾರಣಾಸಿಯಲ್ಲಿರುವ ಸುಮಾರು 2,000 ವಿಧವಾ ಮಹಿಳೆಯರ ಪರವಾಗಿ 10 ಮಹಿಳೆಯರು ದೆಹಲಿಗೆ ಆಗಮಿಸಿ ಪ್ರಧಾನಿ ಮೋದಿಯನ್ನು ಕಂಡು ರಕ್ಷಾಬಂಧನವನ್ನು ಕಟ್ಟಲಿದ್ದಾರೆ.
 
ಇದರ ಹೊರತಾಗಿ, ಬೃಂದಾವನದ ವಿಧನೆಯರು ಸುಮಾರು 1,000 ರಾಖಿಗಳನ್ನು ಪ್ರಧಾನಿಯವರಿಗೆ ಕಳುಹಿಸಲಿದ್ದಾರೆ.
 
ಅದೆಲ್ಲ ಸರಿ, ರಾಖಿಯನ್ನು ಕಟ್ಟಿ ತಮ್ಮ ಪ್ರೀತಿಯ ಸಹೋದರನಿಂದ ಅವರು ಯಾವ ಉಡುಗೊರೆಯನ್ನು ಕೇಳಲಿದ್ದಾರೆ? ಈ ರಾಖಿ ಸಹೋದರಿಯರು ರಾಷ್ಟ್ರೀಯ ಭದ್ರತೆ ಮತ್ತು ದೇಶಲ್ಲಿರುವ ವಿಧವೆಯರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸುವಂತೆ ಆಶ್ವಾಸನೆ ನೀಡುವಂತೆ ಅವರು ಕೇಳಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ವೆಬ್ದುನಿಯಾವನ್ನು ಓದಿ