ವೆಬ್‌ದುನಿಯಾ: ಆನ್‌ಲೈನ್ ಪತ್ರಿಕಾ ರಂಗದಲ್ಲಿ 17 ವರ್ಷ ಸೇವೆ ಸಲ್ಲಿಸಿದ ಸಂಭ್ರಮ

ಗುರುವಾರ, 22 ಸೆಪ್ಟಂಬರ್ 2016 (20:05 IST)
ವೆಬ್‌ದುನಿಯಾ ಸಂಸ್ಥೆಗೆ ಸೆಪ್ಟೆಂಬರ್ 23 ತುಂಬಾ ಮಹತ್ವದ ದಿನ. ಸಂಸ್ಥೆಯ ಆರಂಭದ ದಿನವಾಗಿದೆ. ವಿಶ್ವದಲ್ಲಿಯೇ ಹಿಂದಿ ಪೋರ್ಟಲ್ ಆರಂಭಿಸಿದ ಮೊದಲ ಸಂಸ್ಥೆ ಎನ್ನುವ ಗೌರವ ಪಡೆದಿದೆ. ಕೇವಲ ಒಂದು ಸಣ್ಣ ಕೋಣೆಯಲ್ಲಿ ಆರಂಭವಾದ ವೆಬ್‌ದುನಿಯಾ ಸಂಸ್ಥೆ ಬೃಹದಾಕಾರವಾಗಿ ಬೆಳೆದು ನಿಂತಿರುವುದು ಯಾವ ರೋಚಕತೆಗೂ ಕಮ್ಮಿಯಿಲ್ಲ. 1998ರಲ್ಲಿ ಆರಂಭವಾದ ಸಂಸ್ಥೆ ಬಹುಭಾಷಾ ಇ-ಮೇಲ್ ಸೌಲಭ್ಯ, ಇ-ಪತ್ರಗಳಿಗೆ ಚಾಲನೆ ನೀಡಿತು.  
 
ಭಾರತದಲ್ಲಿ 1980ರ ದಶಕದಲ್ಲಿ ಇಂಟರ್‌ನೆಟ್ ಸೇವೆ ಆರಂಭವಾಗಿತ್ತು. ಆದರೆ, 1995 ಆಗಸ್ಟ್ 15 ರಂದು ಬಿಎಸ್‌ಎನ್‌ಎಲ್ ಸಂಸ್ಥೆ ಅಧಿಕೃತವಾಗಿ ಇಂಟರ್‌ನೆಟ್ ಸೇವೆ ಆರಂಭಿಸಿತ್ತು. ಆ ಸಂದರ್ಭದಲ್ಲಿ ಕೇವಲ ಆಂಗ್ಲ ಭಾಷೆಯ ವೆಬ್‌ಸೈಟ್‌ಗಳಿದ್ದವು. ಪ್ರತಿಯೊಂದು ಸರಕಾರಿ ಕಾರ್ಯ ಕೂಡಾ ಆಂಗ್ಲ ಭಾಷೆಯಲ್ಲಿಯೇ ನಡೆಯುತ್ತಿತ್ತು. ಭಾರತದಲ್ಲಿ ಇಂಟರ್‌ನೆಟ್ ಆರಂಭವಾದ ಮೂರು ವರ್ಷಗಳ ನಂತರ ಹಿಂದಿ ವೆಬ್‌ದುನಿಯಾ ಡಾಟ್ ಕಾಮ್ ಪೋರ್ಟಲ್ ಆರಂಭವಾಯಿತು. ಇದೊಂದು ಹಿಂದಿ ಭಾಷೆಯಲ್ಲಿಯೇ ಹೊಸ ಕ್ರಾಂತಿ ಎಂದು ಬಣ್ಣಿಸಲಾಗಿತ್ತು. ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಿದ ವೆಬ್‌ದುನಿಯಾಗೆ ಕೊನೆಗೂ ಫಲ ದೊರೆಯಿತು.
 
ವೆಬ್‌ದುನಿಯಾ ಹಿಂದಿ ಭಾಷೆಯ ಪೋರ್ಟಲ್ ಆರಂಭಿಸಿದಾಗ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಗಿ ಬಂತು. ಅಂದಿನ ಸಂದರ್ಭದಲ್ಲಿ ಪ್ರತಿಯೊಬ್ಬರು ಪತ್ರಿಕೆಗಳನ್ನು ಅವಲಂಬಿಸಿದ್ದರು. ಪತ್ರಿಕಾ ಓದುಗರನ್ನು ಪೋರ್ಟಲ್‌ಗೆ ಆಕರ್ಷಿಸುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಇದೊಂದು ದುಸ್ಸಾಹಸವಾಗಿತ್ತು.  
ಕಾಲ ಕಳೆದಂತೆ ಪರಿಸ್ಥಿತಿಯಲ್ಲಿ ಬದಲಾವಣೆಗಳಾದವು. ವೆಬ್‌ದುನಿಯಾ ಸಂಸ್ಥೆ ಪಟ್ಟ ಪರಿಶ್ರಮಕ್ಕೆ ಫಲ ದೊರೆಯಲು ಆರಂಭಿಸಿತ್ತು. ಓದುಗರು ಪೋರ್ಟಲ್‌ಗೆ ಬರಲು ಆರಂಭಿಸಿದರು. ಇಂದು ಕೇವಲ ಭಾರತವಲ್ಲ ವಿಶ್ವದಾದ್ಯಂತ ವೆಬ್‌ದುನಿಯಾ ಸಂಸ್ಥೆ ತನ್ನದೇ ಆದ ಸ್ಥಾನ ಪಡೆದಿದೆ. ವಿದೇಶಗಳಲ್ಲಿರುವ ಹಿಂದಿ ಭಾಷಿಕರ ಅಚ್ಚು ಮೆಚ್ಚಿನ ಪೋರ್ಟಲ್ ಇದಾಗಿದೆ. ವೆಬ್‌ದುನಿಯಾ ಸಂಸ್ಥೆ ಇವತ್ತು ವಿಶ್ವದಾದ್ಯಂತ ಹರಡಲು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್ ಛಜಲಾನಿಯವರ ದೂರದಷ್ಟಿ ಕಾರಣವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. 
 
ಕೆಲವು ದಶಕಗಳ ಹಿಂದೆ ಪತ್ರಿಕೆಗಳನ್ನು ಕತ್ತಿಗಿಂತ ಹರಿತ, ತಲವಾರ್‌‌ಗಿಂತ ಹೆಚ್ಚು ಶಕ್ತಿಶಾಲಿ ಎಂದು ಬಿಂಬಿಸುತ್ತಿರುವ ಸಮಯದಲ್ಲಿ ಓದುಗರಿಗೆ ಕಂಪ್ಯೂಟರ್ ಮುಂದೆ ಕುಡಿಸಿ ಅವರ ಕೈಗಿ ಮೌಸ್ ಹಿಡಿಯಲು ಕಲಿಸುವುದು ತುಂಬಾ ಕಷ್ಟದ ಕೆಲಸವಾಗಿತ್ತು. ವೆಬ್‌ದುನಿಯಾ ಸಂಸ್ಥೆಯ ಅವಿರತವಾದ ಪರಿಶ್ರಮ, ದೂರದೃಷ್ಟಿ ಅಸಾಧ್ಯವನ್ನು ಸಾಧ್ಯವಾಗಿಸುವಲ್ಲಿ ಯಶಸ್ವಿಯಾಗಿದೆ. ದೇಶದ ಪ್ರಮುಖ ಹಿಂದಿ ಪೋರ್ಟಲ್‌ಗಳಲ್ಲಿ ವೆಬ್‌ದುನಿಯಾ ಸ್ಥಾನ ಪಡೆದಿದೆ.
ವೆಬ್‌ದುನಿಯಾ ಸಂಸ್ಥೆ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹಿಂದಿ ಭಾಷೆಯ ಪೋರ್ಟಲ್ ಆರಂಭಿಸುವುದರೊಂದಿಗೆ ದಕ್ಷಿಣ ಭಾರತದ ಕನ್ನಡ, ತಮಿಳು, ಮಲೆಯಾಳಂ ಮತ್ತು ತೆಲುಗು ಭಾಷೆಗಳ ಪೋರ್ಟಲ್‌ಗಳನ್ನು ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿದೆ. ದಕ್ಷಿಣ ಭಾರತದ ನಾಲ್ಕು ಪೋರ್ಟಲ್‌ಗಳು ದೇಶದಲ್ಲಿಯೇ ಅಲ್ಲ ವಿಶ್ವದಲ್ಲಿಯೇ ತುಂಬಾ ಜನಪ್ರಿಯತೆಯನ್ನು ಪಡೆದಿವೆ. ಇಂಟರ್‌ನೆಟ್ ಕ್ಷೇತ್ರದಲ್ಲಿ ಹಲವು ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ವೆಬ್‌ದುನಿಯಾ ಸಂಸ್ಥೆ ನೂರಾರು ವರ್ಷಗಳ ಕಾಲ ಬಾಳಿ ಉತ್ತಮ ಸಾಧನೆ ತೋರಲಿ ಎನ್ನುವುದೇ ನಮ್ಮೆಲ್ಲರ, ಓದುಗರ ಬಯಕೆಯಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ