ವಿದೇಶಾಂಗ ನೀತಿಯಲ್ಲಿ ಮೋದಿಯ ಅಸ್ತ್ರಗಳೇನು?

ಸೋಮವಾರ, 31 ಜನವರಿ 2022 (12:40 IST)
ವಿಶ್ವದ ಯಾವುದೇ ದೇಶದ ವಿದೇಶಾಂಗ ನೀತಿ ಆ ದೇಶದ ರಾಷ್ಟ್ರೀಯ ಹಿತಾಸಕ್ತಿಯ ಸುತ್ತಲೇ ಕೇಂದ್ರೀಕೃತವಾಗಿರುತ್ತದೆ ಮತ್ತು ಅದು ಹಾಗೇ ಇರಬೇಕು ಕೂಡ.
 
ಭಾರತದಲ್ಲಿ ಕಾಂಗ್ರೆಸ್ ಪಕ್ಷದ ಸುದೀರ್ಘ 70 ವರ್ಷಗಳ ಅಧಿಕಾರದ ಕಾಲದಲ್ಲಿ, ಅದರಲ್ಲೂ ಯುಪಿಎ-1 ಮತ್ತು 2ನೇ ಅವಧಿಯಲ್ಲಿ ಇದ್ದ ವಿದೇಶಾಂಗ ನೀತಿಯು ರಾಷ್ಟ್ರೀಯ ಹಿತಾಸಕ್ತಿಗಿಂತ ಹೆಚ್ಚಾಗಿ ಪಕ್ಷದ ಹಿತಾಸಕ್ತಿಯನ್ನು ಕೇಂದ್ರವಾಗಿರಿಸಿಕೊಂಡಿತ್ತು. ಅದು ನಮಗೆ ಸ್ಪಷ್ಟವಾಗಿ ಗೋಚರಿಸಿದ್ದು ಎರಡು ಸಂದರ್ಭದಲ್ಲಿ.

26/11 ಮುಂಬೈ ದಾಳಿಯ ಸಮಯದಲ್ಲಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ದಾಳಿ ಮಾಡಲು ಸಜ್ಜಾಗಿ ನಿಂತಿದ್ದ ವಾಯಪಡೆಯನ್ನು ಅಂದಿನ ಸರ್ಕಾರ ತಡೆಯಿತು. ಜೊತೆಗೆ ಸೆರೆ ಸಿಕ್ಕ ಪಾಕಿಸ್ತಾನದ ಉಗ್ರ ಅಜ್ಮಲ್ ಕಸಬ್ನನ್ನು ಬೆಂಗಳೂರು ಮೂಲದ ಹಿಂದೂ ಉಗ್ರ ಎಂದು ಬಿಂಬಿಸುವ ಪ್ರಯತ್ನ ನಡೆಯಿತು.

ಇದನ್ನು ಸ್ವತಃ ಮುಂಬೈ ದಾಳಿಯ ಕಾಲದಲ್ಲಿ ಮುಂಬೈ ಪೊಲೀಸ್ ಕಮಿಷನರ್ ಆಗಿದ್ದ ರಾಕೇಶ್ ಮಾರಿಯಾ ತಮ್ಮ ಜೀವನ ಚರಿತ್ರೆ ‘ಲೆಟ್ ಮಿ ಸೇ ಇಟ್ ನೌ’ ಪುಸ್ತಕದಲ್ಲಿ ಹೇಳಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಪಕ್ಷದ ದಿಗ್ವಿಜಯ್ ಸಿಂಗ್ ಪಾಕಿಸ್ತಾನಿ ಉಗ್ರರು ನಡೆಸಿದ ಈ ಸಂಚನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ಆರೋಪಿಸಿ ಒಂದು ಪುಸ್ತಕವನ್ನೂ ಬರೆದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ