ರೆಸಾರ್ಟ್‌ ತೋರಿಸುತ್ತೇನೆ ಬಾ ಅಂತ ಕರೆತಂದು ಆತ ಮಾಡಿದ್ದಾದ್ರು ಏನು?

ಭಾನುವಾರ, 27 ಆಗಸ್ಟ್ 2023 (08:15 IST)
ಪಣಜಿ : ಗೋವಾಕ್ಕೆ ಬನ್ನಿ ಇಲ್ಲಿನ ಪ್ರವಾಸಿ ತಾಣಗಳನ್ನ ತೋರಿಸುತ್ತೇನೆ, ಮೂಲ ಸೌಕರ್ಯಗಳನ್ನ ತೋರಿಸುತ್ತೇನೆ ಅಂತಾ ಕರೆದು ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಗೋವಾದಲ್ಲಿ ನಡೆದಿದ್ದು, ಶುಕ್ರವಾರ (ಇಂದು) ಬೆಳಕಿಗೆ ಬಂದಿದೆ.

ಉತ್ತರ ಗೋವಾದ ಅಸ್ಸೋನೋರಾ ಗ್ರಾಮದ ರೆಸಾರ್ಟ್‌ನಲ್ಲಿ ಪ್ರವಾಸಕ್ಕೆ ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಗುಜರಾತ್ ಮೂಲದ ಟೆಕ್ಕಿಯನ್ನ ಗೋವಾ ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್‌ 23 ರಂದು ಘಟನೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ದೂರಿನ ಆಧಾರದ ಮೇಲೆ ಪೊಲೀಸರು 47 ವರ್ಷದ‌ ಕಾಮುಕನನ್ನ ಬಂಧಿಸಿದ್ದಾರೆ. ಆರೋಪಿಯನ್ನ ಲಕ್ಷ್ಮಣ್‌ ಶಿಯಾರ್‌ ಎಂದು ಗುರುತಿಸಲಾಗಿದೆ.

ಸಂತ್ರಸ್ತೆ ಮತ್ತು ಆರೋಪಿ ಕೆಲವು ದಿನಗಳ ಹಿಂದೆ ವಿಮಾನದಲ್ಲಿ ಭೇಟಿಯಾಗಿದ್ದರು. ಈ ವೇಳೆ ಆರೋಪಿ ಆಕೆಯ ಫೋನ್‌ ನಂಬರ್‌ ಪಡೆದುಕೊಂಡಿದ್ದ. ನಂತರ ಇಬ್ಬರು ಪರಸ್ಪರ ಫೋನ್‌ನಲ್ಲಿ ಸಂಪರ್ಕದಲ್ಲಿದ್ದರು. ಇತ್ತೀಚೆಗೆ ಸಂತ್ರಸ್ತ ಮಹಿಳೆ ಮತ್ತು ಆರೋಪಿ ಪ್ರತ್ಯೇಕವಾಗಿ ಗೋವಾಕ್ಕೆ ಭೇಟಿ ನೀಡಿದ್ದರು.

ಆಗಸ್ಟ್‌ 23 ರಂದು ಮಹಿಳೆಗೆ ಕರೆ ಮಾಡಿದ್ದ ಆರೋಪಿ ರೆಸಾರ್ಟ್‌ನಲ್ಲಿರುವ ಸೌಕರ್ಯಗಳನ್ನು ತೋರಿಸುತ್ತೇನೆ ಎಂದು ತಾನು ಉಳಿದುಕೊಂಡಿದ್ದ ರೆಸಾರ್ಟ್‌ಗೆ ಬರಲು ಹೇಳಿದ್ದಾನೆ. ಮಹಿಳೆ ಒಂಟಿಯಾಗಿ ರೆಸಾರ್ಟ್‌ಗೆ ಹೋಗಿದ್ದಾಳೆ. ಈ ವೇಳೆ ತನ್ನ ರೂಮಿಗೆ ಕರೆದುಕೊಂಡು ಹೋಗಿದ್ದ ಕಿಡಿಗೇಡಿ ಅತ್ಯಾಚಾರ ಎಸಗಿದ್ದಾನೆ. ನಂತರ ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್‌ ಅಧಿಕಾರಿ ದಳವಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ