ವಿಧಾನ ಪರಿಷತ್ ರದ್ದುಪಡಿಸುವ ಬಗ್ಗೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಹೇಳಿದ್ದೇನು?

ಮಂಗಳವಾರ, 28 ಜನವರಿ 2020 (06:48 IST)
ಆಂಧ್ರಪ್ರದೇಶ : ರಾಜ್ಯ ವಿಧಾನ ಪರಿಷತ್ ರದ್ದುಪಡಿಸುವ ಜಗನ್ ಮೋಹನ್ ರೆಡ್ಡಿ ಸರ್ಕಾರದ ತೀರ್ಮಾನಕ್ಕೆ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಗರಂ ಆಗಿದ್ದಾರೆ.


ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪವನ್ ಕಲ್ಯಾಣ್, ಜಗನ್ ಮೋಹನ್ ರೆಡ್ಡಿ ಸರ್ಕಾರದ ಈ ತೀರ್ಮಾನ ನ್ಯಾಯಸಮ್ಮತ ಅಲ್ಲ. ಇದು ಸಂವಿಧಾನಕ್ಕೆ ವಿರುದ್ಧವಾದ ನಿರ್ಧಾರ ಎಂದು ಕಿಡಿಕಾರಿದ್ದಾರೆ.

ವೈ.ಎಸ್.ರಾಜಶೇಖರ್ ರೆಡ್ಡಿ ಸಿಎಂಯಾಗಿದ್ದ ವೇಳೆ ರಾಜ್ಯ ವಿಧಾನ ಪರಿಷತ್ ಶುರು ಮಾಡಲಾಯ್ತು. ಅಂದಿನ ವಿಧಾನ ಪರಿಷತ್ ನ್ನು ಇಂದು  ಜಗನ್ ಮೋಹನ್ ರೆಡ್ಡಿ ಸರ್ಕಾರ ರದ್ದುಗೊಳಿಸಿರುವುದು ಖಂಡನೀಯ. ಇದರ ವಿರುದ್ಧ ಜನಸೇನೆ ಹೋರಾಟ ಮಾಡಲಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಲುವಾಗಿ ವಿಧಾನ ಪರಿಷತ್ ಬೇಕಿದೆ ಎಂದು   ಪವನ್ ಕಲ್ಯಾಣ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ