ಮದುವೆಯಾಗುವುದಾಗಿ ಬಾಡಿಗೆ ಮನೆಗೆ ಕರೆದುಕೊಂಡು ಹೋದವ ಅಲ್ಲಿ ಹುಡುಗಿಗೆ ಮಾಡಿದ್ದೇನು ಗೊತ್ತಾ?

ಸೋಮವಾರ, 21 ಡಿಸೆಂಬರ್ 2020 (06:40 IST)
ಹರಿಯಾಣ: ವಿವಾಹಿತನೊಬ್ಬ 19 ವರ್ಷದ ಹುಡುಗಿಗೆ ಮದುವೆಯಾಗುವ ನೆಪಯೊಡ್ಡಿ ಆಕೆಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಗೆ ಮದುವೆಯಾಗಿ 6 ವರ್ಷದ ಮಗನಿದ್ದಾನೆ. ಈ ನಡುವೆ ಆತ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡು ಆಕೆಯನ್ನು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅವಳನ್ನು ಕರೆದುಕೊಂಡು ಹೋಗಿ ಬಾಡಿಗೆ ಮನೆಯೊಂದರಲ್ಲಿ ಕೂಡಿಹಾಕಿ ಹಲವು ಬಾರಿ ಮಾನಭಂಗ ಎಸಗಿದ್ದಾನೆ.

ಮಗಳನ್ನು ಆರೋಪಿ ಅಪಹರಿಸಿರುವುದಾಗಿ ಸಂತ್ರಸ್ತೆಯ ತಾಯಿ ದೂರು ನೀಡಿದ್ದ ಹಿನ್ನಲೆಯಲ್ಲಿ ಪೊಲೀಸರು ಸಂತ್ರಸ್ತೆಯನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಆಕೆ ಆರೋಪಿಯ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ ಕಾರಣ ಪೊಲೀಸರು ಆರೋಪಿಯನ್ನುಬಂಧಿಸಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ