ಹೆತ್ತ ಮಗುವನ್ನು ಹತ್ಯೆ ಮಾಡಿದ ತಾಯಿ ಹೇಳಿದ್ದೇನು ಗೊತ್ತಾ?
ಗುರುವಾರ, 27 ಡಿಸೆಂಬರ್ 2018 (08:50 IST)
ಉತ್ತರ ಪ್ರದೇಶ : ಮಗುವಿಗಾಗಿ ತಾಯಿ ಜೀವವನ್ನೇ ನೀಡುತ್ತಾಳೆ. ಆದರೆ ಉತ್ತರ ಪ್ರದೇಶದ ಲಕ್ನೋದಲ್ಲಿ ತಾಯಿಯೊಬ್ಬಳು ತನ್ನ ನಾಲ್ಕು ತಿಂಗಳ ಮಗುವಿನ ಜೀವವನ್ನೇ ತೆಗೆದಿದ್ದಾಳೆ.
ಶುಭಾ ತನ್ನ ಮಗುವನ್ನೇ ಕೊಂದ ಪಾತಕಿ. ಬ್ರಜನಂದನ್ ಹಾಗೂ ಶುಭಾ ಇಬ್ಬರು 2009ರಲ್ಲಿ ಪ್ರೀತಿಸಿ ಮದುವೆಯಾಗಿದ್ದು, ನಾಲ್ಕು ಬಾರಿ ಗರ್ಭಪಾತವಾದ್ಮೇಲೆ ಹೆಣ್ಣು ಮಗು ಜನಿಸಿತ್ತು. ಆದರೆ ಈ ಪಾತಕಿ ತಾಯಿ ಮಗುವನ್ನು ಚೆನ್ನಾಗಿ ನೋಡಿಕೊಳ್ಳುವ ಬದಲು ಸೋಮವಾರ ರಾತ್ರಿ ಮಗುವಿನ ಬಾಯಿಗೆ ಬಟ್ಟೆ ಹಾಕಿ ಮೂಗು ಹಿಡಿದು ಕೊಲೆ ಮಾಡಿದ್ದಾಳೆ. ನಂತರ ಮಂಗಳವಾರ ಬೆಳಿಗ್ಗೆ ಪತಿಯ ಬಳಿ ಮಗುವನ್ನು ಹತ್ಯೆ ಮಾಡಿ ಎಲ್ಲರಿಗೂ ಮುಕ್ತಿ ನೀಡಿದ್ದೇನೆ ಎಂದು ಹೇಳಿದ್ದಾಳೆ.
ಬ್ರಜನಂದನ್ ಪೊಲೀಸರಿಗೆ ಕರೆ ಮಾಡಿ ಈ ಬಗ್ಗೆ ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಶುಭಾ ರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಒಳ್ಳೆ ತಾಯಿಯಾಗಲು ಸಾಧ್ಯವಾಗಲಿಲ್ಲ. ಹಾಗಾಗಿ ಹತ್ಯೆ ಮಾಡಿದೆ ಎಂದು ಆಕೆ ತಪ್ಪೊಪ್ಪಿಕೊಂಡಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.