ಮಾತೃಭಾಷೆ ಹಾಗೂ ಹೊಸ ಶಿಕ್ಷಣ ನೀತಿಯ ಮಹತ್ವದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ಶುಕ್ರವಾರ, 7 ಆಗಸ್ಟ್ 2020 (13:39 IST)
ನವದೆಹಲಿ : ಮಾತೃಭಾಷೆ  ಹಾಗೂ ಹೊಸ ಶಿಕ್ಷಣ ನೀತಿಯ ಮಹತ್ವದ ಬಗ್ಗೆ ಪ್ರಧಾನಿ ಮೋದಿ ವಿವರಿಸಿದ್ದಾರೆ.

ಮಾತೃಭಾಷೆ ಶಿಕ್ಷಣ ಅತಿಮುಖ್ಯ. ಮಾತೃಭಾಷೆಯಲ್ಲಿ ಮಗುವಿನ ಕಲಿಕೆಯ ವೇಗ ಹೆಚ್ಚುತ್ತದೆ. ಮಾತೃಭಾಷೆಯಿಂದ ಶಿಕ್ಷಣದ ಅಡಿಪಾಯ ಗಟ್ಟಿಯಾಗುತ್ತೆ ಎಂದು ಪ್ರಧಾನಿ ಮೋದಿ ಮಾತೃ ಭಾಷೆಯ ಪ್ರಾಮುಖ್ಯತೆ ಬಗ್ಗೆ ತಿಳಿಸಿದ್ದಾರೆ.

ಹಾಗೇ ಹೊಸ ಶಿಕ್ಷಣ ನೀತಿ ಜಾರಿ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಪದವಿ ಶಿಕ್ಷಣ ವ್ಯವಸ್ಥೆಯಲ್ಲೂ ಭಾರೀ ಬದಲಾವಣೆ. ಸೈನ್ಸ್, ಆರ್ಟ್ಸ್, ಕಾಮರ್ಸ್ ಎಂಬ ಭೇದ ಇರಲ್ಲ. ಮಧ್ಯೆದಲ್ಲೆ ಕೋರ್ಸ್ ನಿಲ್ಲಿಸುವವರಿಗೆ ತಡೆ ಇಲ್ಲ. ಕೋರ್ಸ್ ನಿಲ್ಲಿಸಿ ಇನ್ನೊಂದು ಕೋರ್ಸ್ ಸೇರಬಹುದು. ನೌಕರಿ ಸೇರುವ ಕೌಶಲ್ಯ ಹೆಚ್ಚಿಸುವಂಥ ಕೋರ್ಸ್ ಗೆ ಸೇರಬಹುದು ಎಂದು ಹೊಸ ಶಿಕ್ಷಣ ನೀತಿಯ ಮಹತ್ವವನ್ನು ವಿವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ