ಅಪ್ಪಾ ಎಂದು ಕರೆದ ಮಗುವಿಗೆ ಪೊಲೀಸ್ ಕಾನ್ ಸ್ಟೇಬಲ್ ಹೀಗಾ ಮಾಡೋದು?
ಭಾನುವಾರ, 1 ನವೆಂಬರ್ 2020 (10:59 IST)
ರಾಯಪುರ : ಚತ್ತೀಸ್ ಗಡದ ಬಲೋಡ್ ಜಿಲ್ಲೆಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಸಿಗರೇಟ್ ನಿಂದ 2 ವರ್ಷದ ಬಾಲಕಿಯನ್ನು ಸುಟ್ಟು, ಆಕೆಯ ತಾಯಿಯನ್ನು ಥಳಿಸಿದ್ದಾನೆ ಎಂಬ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ.
ಅವಿನಾಶ್ ರೈ ಬಂಧಿತ ಕಾನ್ ಸ್ಟೇಬಲ್. ಈತ ಮಗುವಿನ ತಾಯಿಗೆ ಸಾಲ ನೀಡಿದ್ದನು. ಅದನ್ನು ಸಂಗ್ರಹಿಸಲು ಆಕೆಯ ಮನೆಗೆ ಬಂದಿದ್ದಾನೆ. ಆ ವೇಳೆ ಮಗು ಆರೋಪಿಯ ಬಳಿ ಬಂದು ಅಪ್ಪಾ ಎಂದ ಕರೆದಿದೆ. ಇದರಿಂದ ಕೋಪಗೊಂಡ ಆತ ಸಿಗರೇಟ್ ನಿಂದ ಮಗುವಿನ ಮುಖ, ಹೊಟ್ಟೆ ಮತ್ತು ಕೈಗಳನ್ನು ಸುಟ್ಟಿದ್ದಾನೆ.
ಈ ಬಗ್ಗೆ ಮಹಿಳೆ ದೂರು ದಾಖಲಿಸಿದ ಹಿನ್ನಲೆಯಲ್ಲಿ ಪೊಲೀಸರು ಆರೋಪಿ ಕಾನ್ ಸ್ಟೇಬಲ್ ನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.