ಪಿಲಿಭಿತ್ : ನಾಲ್ವರು ಸಹೋದರರು ಸೇರಿ 17 ವರ್ಷದ ಯುವತಿಯ ಮನೆಗೆ ನುಗ್ಗಿ ಆಕೆಯ ಮೇಲೆ ಮಾನಭಂಗ ಎಸಗಿ ಅದನ್ನು ಚಿತ್ರೀಕರಿಸಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಯುವತಿಯ ಮನೆಗೆ ನಿಗ್ಗಿದ ನಾಲ್ವರು ಅವರ ಮನೆಯವರನ್ನು ಹೆದರಿಸಿ ಅದದರಲ್ಲಿ ಒಬ್ಬ ಯುವತಿಯ ಮೇಲೆ ಮಾನಭಂಗ ಎಸಗಿದ್ದಾನೆ, ಉಳಿದವರು ಅದನ್ನು ಚಿತ್ರೀಕರಿಸಿದ್ದಾರೆ. ಬಳಿಕ ಪೊಲಿಸರಿಗೆ ತಿಳಿಸಿದರೆ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಆದರೆ ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಖೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.