ಭೇಟಿ ಮಾಡಲು ಬಂದ ಸ್ನೇಹಿತೆ ಹಾಗೂ ಆಕೆಯ ಸಹೋದರಿಗೆ ಗೆಳೆಯರು ಮಾಡಿದ್ದೇನು?

ಶನಿವಾರ, 19 ಡಿಸೆಂಬರ್ 2020 (06:32 IST)
ಪುಣೆ : ಹದಿಹರೆಯದ ಇಬ್ಬರು  ಸಹೋದರಿಯರಿಗೆ ಅವರ ಸ್ನೇಹಿತರೇ ಲೈಂಗಿಕ ಕಿರುಕುಳ ನೀಡಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಐವರು ಯುವಕರು ಸ್ನೇಹಿತೆಯನ್ನು ಭೇಟಿ ಮಾಡುವಂತೆ ಕೇಳಿಕೊಂಡಿದ್ದಾರೆ. ಹುಡುಗಿ ತನ್ನ 14 ವರ್ಷದ ಸಹೋದರಿಯ ಜೊತೆ ಅವರನ್ನು ಭೇಟಿ ಮಾಡಿದ ವೇಳೆ ಅವರು ಅವರಿಬ್ಬರನ್ನು ಅಪಹರಿಸಿ ಮಾನಭಂಗ ಎಸಗಿದ್ದಾರೆ.

ಮರುದಿನ ಅವರನ್ನು ಬಿಡುಗಡೆ ಮಾಡಿದಾಗ ಅವರು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂಡಗಳನ್ನು ರಚಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ