ಅಪ್ರಾಪ್ತನ ಮಾತು ಕೇಳಿ ಅನೈತಿಕ ಸಂಬಂಧ ಹೊಂದಿದ ವಿವಾಹಿತೆಗೆ ಆಮೇಲೆ ಆಗಿದ್ದೇನು?

ಸೋಮವಾರ, 3 ಫೆಬ್ರವರಿ 2020 (09:07 IST)
ಭೋಪಾಲ್ : ಅಪ್ರಾಪ್ತನ ಮಾತು ಕೇಳಿ ವಿವಾಹಿತ ಮಹಿಳೆಯೊಬ್ಬಳು ಗಂಡನಿಗೆ ಡಿವೋರ್ಸ್ ನೀಡಿ ಮೋಸ ಹೋದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

2 ವರ್ಷಗಳ ಹಿಂದೆ ಮದುವೆಯಾದ ವಿವಾಹಿತೆ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ನೋಡಿಕೊಳ್ಳಲು ಬಂದು ಅಪ್ರಾಪ್ತೊಬ್ಬನ ಪರಿಚಯ ಮಾಡಿಕೊಂಡಿದ್ದಾಳೆ. ಬಳಿಕ ಆತ ತನ್ನನ್ನು ಮದುವೆಯಾಗುತ್ತೇನೆ ಎಂದಿದ್ದಕ್ಕೆ ಪತಿಗೆ ಡಿವೋರ್ಸ್ ನೀಡಿ ಆತ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ.

ಆದರೆ ಇದೀಗ ಆತ ಆಕೆಯನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಕ್ಕೆ ಇದೀಗ ಆತನ ವಿರುದ್ಧ ಗ್ವಾಲಿಯರ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ