ಸೆಕ್ಸ್ ಗೆ ನಿರಾಕರಿಸಿದ್ದೇ ಈಕೆಯ ಪಾಲಿಗೆ ಮುಳುವಾಯಿತು!

ಸೋಮವಾರ, 24 ಸೆಪ್ಟಂಬರ್ 2018 (07:21 IST)
ಚೆನ್ನೈ : ಲೈಂಗಿಕ ಕ್ರಿಯೆಯಲ್ಲಿ ತೊಡಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯ ಜೊತೆಗೆ ಮಕ್ಕಳಿಬ್ಬರಿಗೂ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.


ಕಾರ್ತಿಕ್ ಎಂಬಾತ ಬೆಂಕಿ ಹಚ್ಚಿದ ಪಾಪಿ. ಬೆಂಕಿಗಾಹುತಿಗೊಳಗಾದವರು ಪತ್ನಿ ಪೋಮತಿ, ಮಕ್ಕಳಾದ ನೀಲಾ(5) ಮತ್ತು ಪೂರ್ವಸನ್(6). ಪ್ರತಿದಿನ ಕಾರ್ತಿಕ್ ಮದ್ಯಸೇವನೆ ಮಾಡಿ ಮನೆಗೆ ಬಂದು ಪತ್ನಿಗೆ ಕಿರುಕುಳವನ್ನು ನೀಡುತ್ತಿದ್ದನು. ಅದೇರೀತಿ ಮಂಗಳವಾರ ಮದ್ಯಸೇವನೆ ಮಾಡಿ ಮನೆಗೆ ಬಂದವನೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಪತ್ನಿ ಪೋಮತಿಗೆ ಒತ್ತಾಯಿಸುತ್ತಾನೆ. ಆದರೆ ಪೋಮತಿ ಇದಕ್ಕೆ ನಿರಾಕರಿಸುತ್ತಾಳೆ.


ಇದರಿಂದ ಕೋಪಗೊಂಡ ಕಾರ್ತಿಕ್, ಪೋಮತಿ ಹಾಗೂ ಇಬ್ಬರು ಮಕ್ಕಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಇವರ ಕೂಗು ಕೇಳಿ ಸ್ಥಳೀಯರು ಓಡಿ ಬಂದು ರಕ್ಷಣೆ ಮಾಡಿ, ಆಸ್ಪತ್ರೆಗೆ ಸೇರಿಸಿದ್ದಾರೆ. ಪೋಮತಿ ಹಾಗೂ ಮಕ್ಕಳಿಗೆ ಗಂಭೀರ ಗಾಯಾಗಳಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು. ಆದರೆ ಪೋಮತಿ ಸಾಯುವ ಮುನ್ನ ನಡೆದ ವಿಚಾರವನ್ನು ಪೊಲೀಸರು ತಿಳಿಸಿದ್ದಳು ಎಂಬುದಾಗಿ ತಿಳಿದುಬಂದಿದೆ.


ಈ ಘಟನೆ ಸಂಬಂಧಿಸಿದಂತೆ ಪೊಲೀಸರು ಕಾರ್ತಿಕ್ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ. ಸದ್ಯ ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ