ಭಾರತದಲ್ಲಿ ಶಾಲೆ ಆರಂಭಿಸುವ ಬಗ್ಗೆ ಶಿಕ್ಷಣ ತಜ್ಞರ ಸಲಹೆ ಏನು?
ಗುರುವಾರ, 1 ಅಕ್ಟೋಬರ್ 2020 (10:13 IST)
ನವದೆಹಲಿ : ಭಾರತದಲ್ಲಿ ಶಾಲಾ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ನಿರ್ಧಾರ ಮಾಡಿದ್ದು, ಈ ಬಗ್ಗೆ ಶಿಕ್ಷಣ ತಜ್ಞರು ಸಲಹೆ ನೀಡಿದ್ದಾರೆ.
ಶಾಲಾ-ಕಾಲೇಜು ಆರಂಭಕ್ಕೂ ಮುನ್ನ ಎಚ್ಚರ ವಹಿಸಿ. ಶಾಲೆ ವಿಚಾರದಲ್ಲಿ ಭಾರತಕ್ಕೆ ಅಮೇರಿಕ ಪಾಠವಾಗಲಿ. ಸೆಪ್ಟೆಂಬರ್ ನಲ್ಲೇ ಅಮೇರಿಕದಲ್ಲಿ ಕಾಲೇಜು ಆರಂಭವಾಗಿತ್ತು, ಆದರೆ ಕಾಲೇಜು ಆರಂಭಿಸಿದ್ದಕ್ಕೆ ಸೋಂಕು ದಿಢೀರ್ ಏರಿಕೆಯಾಗಿದೆ. ಅಮೇರಿಕದಲ್ಲಿ ಏಪ್ರಿಲ್ ನಲ್ಲಿ ಸೋಂಕು ಶೇ.2ರಷ್ಟಿತ್ತು. ಆದರೆ ಸೆಪ್ಟೆಂಬರ್ ನಲ್ಲಿ ಶೇ.10ರಷ್ಟು ಏರಿಕೆಯಾಗಿದೆ. ಈಗ ಅಮೇರಿಕದ ಬಳಿಕ ಭಾರತದ ಸರದಿ. ಶಾಲಾ ಕಾಲೇಜು ಆರಂಭಿಸುವ ಮುನ್ನ ಎಚ್ಚರ. ಕಾಲೇಜು ಆರಂಭದಿಂದ ಸೋಂಕು ಏರಿಕೆ ಸಾಧ್ಯತೆ ಇದೆ ಎಂದು ಶಿಕ್ಷಣ ತಜ್ಞರು ಎಚ್ಚರಿಕೆ ನೀಡಿದ್ದಾರೆ.