ನವದೆಹಲಿ: ಪಹಲ್ಗಾಮ್ ನಲ್ಲಿ ಭಾರತೀಯ ಪ್ರವಾಸಿಗರನ್ನು ಕೊಂದು ಹಾಕಿದ ಉಗ್ರರನ್ನು ಮಟ್ಟ ಹಾಕಲು ಪಣ ತೊಟ್ಟಿರುವ ಭಾರತ ಈಗ ಪಾಕಿಸ್ತಾನದ ಸಮುದ್ರ ಗಡಿ ಭಾಗದ ಸಮೀಪ ಐಎನ್ಎಸ್ ವಿಕ್ರಾಂತ್ ನೌಕೆಯನ್ನು ತಂದು ನಿಲ್ಲಿಸಿದೆ. ಈ ಯುದ್ಧ ನೌಕೆಯ ವಿಶೇಷತೆಗಳೇನು ನೋಡಿ.
ಪಾಕಿಸ್ತಾನದ ಉಗ್ರರು ಭಾರತದಲ್ಲಿ ರಕ್ತದೋಕುಳಿ ಆಡಿದಾಗ ಕಳೆದ ಎರಡು ಬಾರಿ ಭೂ ಸೇನೆ ಮತ್ತು ವಾಯುಸೇನೆ ಮೂಲಕ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಇದೀಗ ನೌಕಾಸೇನೆ ಸನ್ನದ್ಧವಾಗಿರುವುದು ನೋಡಿದರೆ ಈ ಬಾರಿ ನೌಕಾ ಸೇನೆಯಿಂದಲೇ ದಾಳಿ ನಡೆಸಬಹುದೇ ಎಂಬ ಅನುಮಾನಗಳಿವೆ.
ಐಎನ್ಎಸ್ ವಿಕ್ರಾಂತ್ ವಿಶೇಷತೆ
ಇದು ಸ್ವದೇಶೀ ನಿರ್ಮಿತ ಮೊದಲ ಯುದ್ಧನೌಕೆಯಾಗಿದೆ. ಇದನ್ನು ಸಂಪೂರ್ಣವಾಗಿ ಭಾರತದಲ್ಲೇ ತಯಾರಿಸಲಾಗಿದೆ. ಆತ್ಮನಿರ್ಭರ ಭಾರತದ ಯೋಜನೆಗೆ ಇದು ಬೆಸ್ಟ್ ಉದಾಹರಣೆಯಾಗಿದೆ. ಸುಮಾರು 30 ಯದ್ಧ ವಿಮಾನಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಮಿಗ್ 29ಕೆ ಮತ್ತು ಹೆಲಿಕಾಪ್ಟರ್ ಗಳ ಕಾರ್ಯಾಚರಣೆಗೂ ಸೂಕ್ತವಾದ ವ್ಯವಸ್ಥೆಯಿದೆ.
ಒಟ್ಟು 260 ಮೀ. ಉದ್ದ ಮತ್ತು 45,000 ಟನ್ ತೂಕವಿದೆ. ಹೈಟೆಕ್ ಕಮಾಂಡ್ ಸೆಂಟರ್, ರಾಡರ್ ವ್ಯವಸ್ಥೆ, ಶತ್ರುಗಳ ಚಲನವಲನಗಳ ಮೇಲೆ ನಿಖರ ನಿಗಾ ವಹಿಸುವ ಸಾಮರ್ಥ್ಯ ಹೊಂದಿದೆ. ಸ್ಕೈ ಜಂಪ್ ರಾಂಪ್, ಟೇಕ್ ಆಫ್ ಗೆ ಕ್ಯಾಚಿಂಗ್ ಸಿಸ್ಟಂ ಇದೆ. ಫುಲ್ ಸ್ಪೀಡ್ ಟೇಕ್ ಆಫ್ ಮತ್ತು ಸುರಕ್ಷಿತವಾಗಿ ಲ್ಯಾಂಡ್ ಆಗುವ ವ್ಯವಸ್ಥೆ ಹೊಂದಿದೆ.
ಈ ಯುದ್ಧ ನೌಕೆ ಈಗ ಪಾಕಿಸ್ತಾನದ ಗಡಿ ಭಾಗದ ಸಮೀಪ ಸೂರತ್ ಬಳಿ ಸಮುದ್ರ ಗಡಿಭಾಗದಲ್ಲಿ ಬಂದು ನಿಂತಿದೆ.