ಸ್ಯಾನಿಟರಿ ಪ್ಯಾಡ್ ಒಳಗಡೆ ಮಹಿಳೆಯರಿಬ್ಬರು ಅಡಗಿಸಿಟ್ಟುಕೊಂಡಿದ್ದೇನು?
ಶನಿವಾರ, 14 ನವೆಂಬರ್ 2020 (11:37 IST)
ಕೊಯಮತ್ತೂರು : 62 ಲಕ್ಷರೂ. ಮೌಲ್ಯದ 1.1ಕೆಜಿ ಚಿನ್ನವನ್ನು ಒಳ ಉಡುಪಿನಲ್ಲಿ ಅಡಗಿಸಿಟ್ಟುಕೊಂಡಿದ್ದ ಇಬ್ಬರು ಮಹಿಳೆಯರನ್ನು ಕೊಯಮತ್ತೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ದೇವಾಣಿ ರಾಧಾಕೃಷ್ಣನ್ ಮತ್ತು ವಸಂತಿ ರಾಮಸ್ವಾಮಿ ಬಂಧಿತ ಮಹಿಳೆಯರು. ಇವರು ಮುಂಜಾನೆ ಏರ್ ಅರೇಬಿಯಾ ವಿಮಾನದಲ್ಲಿ ಶಾರ್ಜಾದಿಂದ ಕೊಯಮತ್ತೂರಿಗೆ ಬಂದಿದ್ದರು.
ಇವರು ಚಿನ್ನವನ್ನು ಪೇಸ್ಟ್ ರೂಪದಲ್ಲಿ ಒಳ ಉಡುಪಿನಲ್ಲಿ ಧರಿಸಿದ್ದ ಸ್ಯಾನಿಟರಿ ಪ್ಯಾಡ್ ಒಳಗಡೆ ಅಡಗಿಸಿಟ್ಟುಕೊಂಡಿದ್ದರು. ಅನುಮಾನಗೊಂಡ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಚಿನ್ನ ಪತ್ತೆಯಾಗಿದೆ ಎನ್ನಲಾಗಿದೆ.