ಹಿಜ್ಬುಲ್ ಉಗ್ರ ಬುಹ್ರಾನ್ ವನಿ ಏನ್‌ಕೌಂಟರ್ ಮಾಡುವ ಅಗತ್ಯವೇನಿತ್ತು: ಪಿಡಿಪಿ

ಗುರುವಾರ, 21 ಜುಲೈ 2016 (12:30 IST)
ಹಿಜ್ಬುಲ್ ಮುಜಾಹಿದಿನ್ ಉಗ್ರ ಬುರ್ಹಾನ್ ವನಿಯನ್ನು ಸೇನಾಪಡೆಗಳು ಏನ್‌ಕೌಂಟರ್ ಮಾಡುವ ಅಗತ್ಯವಾದರೂ ಏನಿತ್ತು ಎಂದು ಜಮ್ಮು ಕಾಶ್ಮಿರದಲ್ಲಿ ಬಿಜೆಪಿ ಮೈತ್ರಿಕೂಟದ ಪಕ್ಷವಾದ ಪಿಡಿಪಿ ಪ್ರಶ್ನಿಸಿದೆ.
 
ಮುಂಗಾರು ಅಧಿವೇಶನದಲ್ಲಿ ಮಾತನಾಡಿದ ಪಿಡಿಪಿ ಸಂಸದ ಮುಜಾಫರ್ ಬೇಗ್, ಬುರ್ಹಾನ್ ವನಿಯ ಬಗ್ಗೆ ಗುಪ್ತಚರ ಅಧಿಕಾರಿಗಳಿಗೆ ಮಾಹಿತಗಳು ಲಭ್ಯವಾಗಿದ್ದರೂ ಈಆ ಮೊದಲೇ ಆತನನ್ನು ಏಕೆ ಬಂಧಿಸಲಿಲ್ಲ. ಎನ್‌ಕೌಂಟರ್ ಮಾಡುವುದು ಸರಿಯೇ ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಕೇಂದ್ರ ಸರಕಾರ ಯಾವತ್ತೂ ನೈತಿಕ ಅಧಿಕಾರವನ್ನು ಬಳಸಬೇಕೆ ಹೊರತು ಸೇನಾಧಿಕಾರವಲ್ಲ ಎಂದು ಮೋದಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
 
ಜಮ್ಮು ಕಾಶ್ಮಿರದಲ್ಲಿ ನಡೆಯುತ್ತಿರುವ ಹಿಂಸಾಚಾರ ಕುರಿತಂತೆ ಕೇಂದ್ರ ಸರಕಾರಿ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. 
 
ಹಿಜ್ಬುಲ್ ಮುಜಾಹಿದಿನ್ ಉಗ್ರ ಬುರ್ಹಾನ್ ವನಿಯನ್ನು ಸೇನಾಪಡೆಗಳು ಏನ್‌ಕೌಂಟರ್ ನಡೆಸಿದ ನಂತರ ಜಮ್ಮು ಕಾಶ್ಮಿರದಾದ್ಯಂತ ಹಿಂಸಾಚಾರ ಭುಗಿಲೆದ್ದಿದೆ. ಆದರೆ, ಸರಕಾರ ವನಿ ಏನ್‌ಕೌಂಟರ್ ಸಮರ್ಥಿಸಿಕೊಂಡಿದೆ.  

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ