ಕಾರ್ಮಿಕ ಸಂಘಟನೆಗಳಿಂದ ಇಂದು ಭಾರತ್ ಬಂದ್

ಶುಕ್ರವಾರ, 2 ಸೆಪ್ಟಂಬರ್ 2016 (10:23 IST)
ಉತ್ತಮ ವೇತನಕ್ಕಾಗಿ ಒತ್ತಾಯಿಸಲು ಹಾಗೂ ಹೊಸ ಕಾರ್ಮಿಕ ಮತ್ತು ಬಂಡವಾಳ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಲು ಬ್ಯಾಂಕಿಂಗ್,  ಟೆಲಿಕಾಂ ಮತ್ತು ಇತರೆ ಕ್ಷೇತ್ರಗಳ 10 ಲಕ್ಷಕ್ಕೂ ಹೆಚ್ಚು ನೌಕರರು ಇಂದು ಭಾರತ್ ಬಂದ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
 
 ಭಾರತ್ ಬಂದ್‌ನ ಇತ್ತೀಚಿನ 10 ಬೆಳವಣಿಗೆಗಳು ಕೆಳಗಿವೆ
ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು ಮತ್ತು ಕಾರ್ಖಾನೆಗಳು ಮುಚ್ಚಲಿವೆ. ಕೆಲವು ರಾಜ್ಯಗಳಲ್ಲಿ ಸ್ಥಳೀಯ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲು ಉದ್ದೇಶಿಸಿದ್ದು, ಇದರಿಂದ ಸಾರ್ವಜನಿಕ ಸಾರಿಗೆಗೆ ದುಷ್ಪರಿಣಾಮ ಬೀರಲಿದೆ.  ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾದ ಕಾರ್ಮಿಕರು ಕೂಡ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ 50 -60ದಿನಗಳ ವರೆಗೆ ಕಲ್ಲಿದ್ದಲ್ಲನ್ನು ತೆಗೆಯದಿದ್ದರೂ ಇಂಧನ ಸ್ಥಾವರಗಳ ಕಾರ್ಯನಿರ್ವಹಣೆಗೆ ಸಾಕಷ್ಟು ಕಲ್ಲಿದ್ದಿಲಿನ ದಾಸ್ತಾನಿದೆ ಎಂದು ಕಲ್ಲಿದ್ದಲು ಮತ್ತು ವಿದ್ಯುತ್ ಸಚಿವ ಪಿಯುಶ್ ಗೋಯಲ್ ತಿಳಿಸಿದರು.
 
 ಕೋಲ್ ಇಂಡಿಯಾದ ಅನಿರೀಕ್ಷಿತ ಬದಲಾವಣೆಯು ಮೋದಿ ಸರ್ಕಾರದ ಯಶಸ್ಸಾಗಿದ್ದು, ಕಂಪನಿಯು ಸಾಕಷ್ಟು ಉತ್ಪಾದಿಸುತ್ತಿರುವುದರಿಂದ  ಮೊದಲ ಬಾರಿಗೆ ರಫ್ತಿಗೆ ಪರಿಶೀಲನೆ ನಡೆಸುತ್ತಿದೆ.
 
ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ ಮತ್ತು ಇಂಡಿಯನ್ ಟ್ರೇಡ್ ಯೂನಿಯನ್‌ಗಳ ಕೇಂದ್ರವು ಮುಷ್ಕರ ಕೈಬಿಡುವಂತೆ ಸರ್ಕಾರದ ಮನವಿಯನ್ನು ತಿರಸ್ಕರಿಸಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ವಿಫಲವಾಗಿರುವುದರಿಂದ ಮುಷ್ಕರ ಕೈಬಿಡುವುದಿಲ್ಲ ಎಂದು ಹೇಳಿದೆ.
 
ವಿಮೆ ಮತ್ತು ರಕ್ಷಣೆ ಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳದ ಮೇಲಿನ ನಿಯಮಗಳನ್ನು ಸಡಿಲಗೊಳಿಸುವುದಕ್ಕೆ ಅವು ಆಕ್ಷೇಪಿಸಿವೆ. ನಷ್ಟಪೀಡಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮುಚ್ಚುವ ಯೋಜನೆಯನ್ನು ಅವು ವಿರೋಧಿಸಿವೆ. ಕಾರ್ಮಿಕ ಸಂಘಟನೆಗಳು ಮುಷ್ಕರ ಕೈಬಿಡುವಂತೆ ಮನವೊಲಿಸಲು ಕಳೆದ ಎರಡು ವರ್ಷಗಳ ನೌಕರರ ಬೋನಸ್ ಬಿಡುಗಡೆ ಮಾಡುವುದಾಗಿಯೂ ಮತ್ತು ಕೌಶಲ್ಯರಹಿತ ಕಾರ್ಮಿಕರ ಕನಿಷ್ಠ ವೇತನ ಏರಿಸುವುದಾಗಿ ಅರುಣ್ ಜೇಟ್ಲಿ ತಿಳಿಸಿದ್ದರು.
 

ವೆಬ್ದುನಿಯಾವನ್ನು ಓದಿ