ವಾಟ್ಸಪ್ ಮೆಸೇಜ್ ಹೊಸ ಫೀಚರ್!
ವಾಟ್ಸಪ್ ಭಾರತದ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ.
ಇದನ್ನು ಜನರು ವೈಯಕ್ತಿಕ ಹಾಗೂ ವೃತ್ತಿಪರ ಸಂವಹನಕ್ಕಾಗಿ ಬಳಸುತ್ತಾರೆ. ವಾಟ್ಸಪ್ ಹೊಸ ಹೊಸ ಫೀಚರ್ಗಳೊಂದಿಗೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದು, ಬಳಕೆದಾರರಿಗೆ ಅನುಕೂಲಕರ ಅಪ್ಗ್ರೇಡ್ ಅನ್ನೂ ತರುತ್ತಿದೆ.
ವಾಟ್ಸಪ್ ಗುಂಪನ್ನು ತಯಾರಿಸಿ, ಅದರಲ್ಲಿ ತನ್ನ ಸಂದೇಶವನ್ನು ಕಳುಹಿಸುವಂತೆ ಬಳಕೆದಾರರಿಗೆ ಸೂಚಿಸುತ್ತದೆ. ಆದರೆ ವಾಟ್ಸಪ್ನಲ್ಲಿ ಗುಂಪನ್ನು ರಚಿಸದೇ 5 ಸಂಪರ್ಕಗಳಿಗಿಂತಲೂ ಹೆಚ್ಚು ಜನರಿಗೆ ಸಂದೇಶಗಳನ್ನು ಒಂದೇ ಬಾರಿ ಕಳುಹಿಸಬಹುದು ಎಂಬ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ.
ಗುಂಪನ್ನು ರಚಿಸುವ ಬದಲು ವಾಟ್ಸಪ್ ಬಳಕೆದಾರರು ಹಲವಾರು ಬಳಕೆದಾರರಿಗೆ ಸಂದೇಶ, ಚಿತ್ರ ಅಥವಾ ವೀಡಿಯೋಗಳನ್ನು ಕಳುಹಿಸಲು ಇನ್ನೊಂದು ಮಾರ್ಗವಿದೆ. ಈ ಟ್ರಿಕ್ ಮೂಲಕ ಒಂದೇ ಬಾರಿ 256 ಜನರೊಂದಿಗೆ ಮಾಹಿತಿಗಳನ್ನು ಹಂಚಿಕೊಳ್ಳಬಹುದು. ವಾಟ್ಸಪ್ನ ಈ ವೈಶಿಷ್ಟ್ಯವನ್ನು ಬ್ರಾಡ್ಕಾಸ್ಟ್ ಲಿಸ್ಟ್ ಎಂದು ಕರೆಯಲಾಗುತ್ತದೆ.
ಬ್ರಾಡ್ಕಾಸ್ಟ್ ಮೆಸೇಜ್ ಮಾಡೋದು ಹೇಗೆ?
ವಾಟ್ಸಪ್ ಅಪ್ಲಿಕೇಶನ್ಗೆ ಹೋಗಿ ಬಲಭಾಗದ ಮೇಲಿನ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. ಅದರಲ್ಲಿ ಕಂಡು ಬರುವ ಹಲವು ಆಯ್ಕೆಗಳಲ್ಲಿ ಎರಡನೆಯ ನ್ಯೂ ಬ್ರಾಡ್ಕಾಸ್ಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಬ್ರಾಡ್ಕಾಸ್ಟ್ ಮಾಡಲು ಸಂಪರ್ಕಗಳನ್ನು ಆಯ್ಕೆ ಮಾಡುವಂತೆ ಅದು ಸೂಚಿಸುತ್ತದೆ. ನಿಮಗೆ ಬೇಕಾದಷ್ಟು ಸಂಪರ್ಕಗಳನ್ನು ಆಯ್ಕೆಮಾಡಿ. ಇದರಲ್ಲಿ 256 ಸಂಪರ್ಕಗಳನ್ನು ಆಯ್ಕೆ ಮಾಡಬಹುದು.
ಎಲ್ಲಾ ಸಂಪರ್ಕಗಳನ್ನು ಕ್ಲಿಕ್ ಮಾಡಿದ ನಂತರ ಬ್ರಾಡ್ಕಾಸ್ಟ್ ವಿಂಡೋವನ್ನು ರಚಿಸಲು ಟಿಕ್ (ಸರಿ) ಮಾರ್ಕ್ ಮೇಲೆ ಕ್ಲಿಕ್ ಮಾಡಿ. ಆಯ್ಕೆ ಮಾಡಿದ ವಾಟ್ಸಪ್ ಸಂಪರ್ಕಗಳಿಗೆ ಒಂದೇ ಬಾರಿ ಯಾವುದೇ ಸಂದೇಶ, ಫೋಟೋ ಅಥವಾ ವೀಡಿಯೋವನ್ನು ಕಳುಹಿಸಲು ನೀವು ಈ ವಿಂಡೋವನ್ನು ಬಳಸಬಹುದು.