ಯಾವ ಸಮಯದಲ್ಲಿ ಕಪ್ಪು ಬಜೆಟ್ ಮಂಡನೆಯಾಗಿತ್ತು?

ಸೋಮವಾರ, 24 ಜನವರಿ 2022 (13:36 IST)
1973-74ನೇ ಹಣಕಾಸು ವರ್ಷದಲ್ಲಿ ಮಂಡನೆಯಾದ ಬಜೆಟ್ ಅನ್ನು ಕಪ್ಪು ಬಜೆಟ್ ಎಂದು ಕರೆಯಲಾಗುತ್ತದೆ.
 
ಆರ್ಥಿಕ ಸಂಕಷ್ಟ, ಬರಗಾಲ, ಬಾಂಗ್ಲಾದೇಶ ಯುದ್ಧದಿಂದಾಗಿ ಆರ್ಥಿಕವಾಗಿ ಜರ್ಜರಿವಾಗಿದ್ದ ಸಮಯ ಅದು. ಆ ವರ್ಷ ಒಟ್ಟು 550 ಕೋಟಿ ರೂ. ಖೋತಾ ಬಜೆಟ್ ಮಂಡನೆ ಮಾಡಲಾಗಿತ್ತು.

ಅಲ್ಲದೇ ಇನ್ಷೂರೆನ್ಸ್ ಕಂಪನಿಗಳು ಹಾಗೂ ಕಲ್ಲಿದ್ದಲು ಗಣಿಗಳನ್ನು ರಾಷ್ಟ್ರೀಕರಣ ಮಾಡಲಾಗಿತ್ತು. ಹೀಗಾಗಿ ಆ ಬಜೆಟ್ ಅನ್ನು ಕಪ್ಪು ಬಜೆಟ್ ಎಂದೇ ಕರೆಯಾಲಾಗುತ್ತದೆ. ಆಗಿನ ವಿತ್ತ ಸಚಿವರಾಗಿದ್ದವರು ಯಶವಂತರಾವ್ ಚವಾಣ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ