ಅಯೋಧ್ಯೆ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರ ಜನವರಿ 22 ರಂದು ಲೋಕಾರ್ಪಣೆಯಾಗುತ್ತಿದೆ. ಆದರೆ ಸಾರ್ವಜನಿಕರಿಗೆ ರಾಮಮಂದಿರ ದರ್ಶನ ಭಾಗ್ಯ ಯಾವಾಗ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.
ಜನವರಿ 22 ರಂದು ಅನೇಕ ಗಣ್ಯಾತಿಗಣ್ಯರು ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಈ ದಿನ ಸಾರ್ವಜನಿಕರು ಬಾರದಂತೆ ರಾಮಜನ್ಮಭೂಮಿ ಟ್ರಸ್ಟ್ ಮನವಿ ಮಾಡಿದೆ. ಸಾಕಷ್ಟು ಜನ ಬರುವುದರಿಂದ ಅಯೋಧ್ಯೆಯಂತಹ ಪುಟ್ಟ ನಗರದಲ್ಲಿ ಕಷ್ಟವಾಗಬಹುದು ಎಂಬ ಕಾರಣಕ್ಕೆ ಸಾರ್ವಜನಿಕರಿಗೆ ಅಂದು ಪ್ರವೇಶವಿರುವುದಿಲ್ಲ.
ಆದರೆ ರಾಮಮಂದಿರ ಲೋಕಾರ್ಪಣೆಯ ಮರುದಿನದಿಂದಲೇ ಅಂದರೆ ಜನವರಿ 23 ರಿಂದಲೇ ಸಾರ್ವಜನಿಕರಿಗೆ ರಾಮಮಂದಿರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ರಾಮಜನ್ಮಭೂಮಿ ಟ್ರಸ್ಟ್ ಹೇಳಿದೆ.
ಜನವರಿ 22 ರಂದು ಮಧ್ಯಾಹ್ನ 12.20 ಕ್ಕೆ ಪ್ರಾಣಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಸುಮಾರು 1 ಲಕ್ಷ ಜನ ಈ ಸಮಾರಂಭವನ್ನು ಕಣ್ತುಂಬಿಕೊಳ್ಳಲಿದ್ದಾರೆ. 7000 ಮಂದಿ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.