ಅಯೋಧ್ಯೆಯಲ್ಲಿ ಪ್ರಧಾನಿ ಮೋದಿಗೆ ಚಹಾ ಮಾಡಿಕೊಟ್ಟ ಮೀರಾ ಯಾರು?

ಭಾನುವಾರ, 31 ಡಿಸೆಂಬರ್ 2023 (09:28 IST)
ಅಯೋಧ್ಯೆ: ಅಯೋಧ್ಯೆಯಲ್ಲಿ ನಿನ್ನೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿ ಮೋದಿ ಭೇಟಿ ನೀಡಿದ್ದರು. ಜೊತೆಗೆ ರೋಡ್ ಶೋ ಮಾಡಿ ಅವರು ಗಮನ ಸೆಳೆದರು.

ಈ ವೇಳೆ ಪ್ರಧಾನಿ ಮೋದಿ ದಿಡೀರ್ ಆಗಿ ಮೀರಾ ಎಂಬ ಬಡ ಮಹಿಳೆಯ ಮನೆಗೆ ಭೇಟಿ ಕೊಟ್ಟು, ಆಕೆಯ ಕೈಯಾರೆ ಚಹಾ ಮಾಡಿಸಿಕೊಂಡು ಸೇವಿಸಿದ್ದಾರೆ. ಅಷ್ಟಕ್ಕೂ ಈ ಮೀರಾ ಯಾರು ಎಂಬ ಕುತೂಹಲ ಈಗ ಎಲ್ಲರಲ್ಲಿದೆ.

ಮೀರಾ ಕೇಂದ್ರ ಸರ್ಕಾರದ ಉಜ್ವಲ್ ಯೋಜನೆಯ ಫಲಾನುಭವಿಗಳಲ್ಲಿ ಒಬ್ಬರು. ಈಕೆಗೆ ತನ್ನ ಮನೆಗೆ ದೇಶದ ಪ್ರಧಾನಿ ಭೇಟಿ ನೀಡುತ್ತಾರೆಂದು ತಿಳಿದಿದ್ದು ಕೇವಲ ಒಂದು ಗಂಟೆಯ ಮುಂಚಿತವಾಗಿ. ಅದೂ ಯಾರೋ ಒಬ್ಬರು ರಾಜಕೀಯ ನಾಯಕರು ಭೇಟಿ ನೀಡಲಿದ್ದಾರೆ ಎಂದು ಮಾತ್ರ ಹೇಳಲಾಗಿತ್ತು.

ದಿಡೀರ್ ಆಗಿ ಪ್ರಧಾನಿಯೇ ಮನೆಗೆ ಬಂದಾಗ ಆಕೆಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲವಂತೆ. ‘ಮನೆಯವರೆಲ್ಲರನ್ನು ಮಾತನಾಡಿಸಿದ ಮೋದಿಜೀ ಬಳಿಕ ನನ್ನ ಬಳಿ ಏನು ಅಡುಗೆ ಮಾಡಿದ್ದೀಯಾ ಕೇಳಿದರು. ನಾನು ಅನ್ನ, ದಾಲ್, ಚಹಾ ಎಂದೆ. ಅದಕ್ಕೆ ಈ ಚಳಿಯಲ್ಲಿ ಬಿಸಿ ಬಿಸಿ ಚಹಾ ಕುಡಿಯಬೇಕೆನಿಸುತ್ತದೆ ಎಂದರು. ಚಹಾ ಕುಡಿದ ಮೇಲೆ ಚಹಾ ತುಂಬಾ ಸಿಹಿಯಾಗಿದೆ ಎಂದರು. ಅದಕ್ಕೆ ನಾನು ಇದೇ ರೀತಿ ಚಹಾ ಮಾಡೋದು ಎಂದು ಹೇಳಿದೆ’ ಎಂದು ಮೀರಾ ವಿವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ