ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ನೇರವಾಗಿ ನೇಮಕವಾಗಲಿರುವ ಮೊದಲ ಮಹಿಳೆ ಯಾರು ಗೊತ್ತಾ...?
ಶುಕ್ರವಾರ, 12 ಜನವರಿ 2018 (07:34 IST)
ನವದೆಹಲಿ: ಹಿರಿಯ ವಕೀಲರಾದ ಇಂದು ಮಲ್ಹೋತ್ರಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಕೊಲಿಜಿಯಂ ಶಿಫಾರಸು ಮಾಡಿದೆ. ಈ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ನೇರವಾಗಿ ನೇಮಕವಾಗಲಿರುವ ಮೊದಲ ಮಹಿಳೆ ಎಂಬ ಹಿರಿಮೆಗೆ ಇಂದು ಮಲ್ಹೋತ್ರಾ ಪಾತ್ರರಾಗಲಿದ್ದಾರಂತೆ.
ಇಂದು ಮಲ್ಹೋತ್ರಾ ಅವರು ನೇಮಕಗೊಂಡರೆ ಸ್ವಾತಂತ್ರ್ಯಾ ನಂತರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೇರಿದ ಏಳನೇ ಮಹಿಳೆ ಎಂದೆನಿಸಿಕೊಳ್ಳಲಿದ್ದಾರೆ. ಉಳಿದವರೆಲ್ಲವರೂ ಹೈಕೋರ್ಟ್‌ಗಳಿಂದ ಬಡ್ತಿಯಾಗಿ ಬಂದವರು. ಈಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಆರ್. ಭಾನುಮತಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ