ತಾಜ್ ಮಹಲ್ ಕಟ್ಟಡವನ್ನು ಕೆಡವಬೇಕು ಎಂದು ಅಜಂಖಾನ್ ಹೇಳಿದ್ಯಾಕೆ?

ಶುಕ್ರವಾರ, 29 ಜೂನ್ 2018 (15:26 IST)
ರಾಂಪುರ : ಈ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ತಾಜ್ ಮಹಲ್ ಶಿವನ ಮಂದಿರವಾಗಿತ್ತು ಎಂದು ನೀಡಿದ್ದ ಹೇಳಿಕೆಗೆ ಇದೀಗ ತಿರುಗೇಟು ನೀಡಿದ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಅವರು ತಾಜ್ ಮಹಲ್ ಕಟ್ಟಡವನ್ನು ಕೆಡವಲು ಸಿಎಂ ಯೋಗಿಗೆ ತಾವು ಬೆಂಬಲ ನೀಡುವುದಾಗಿ ಲೇವಡಿ ಮಾಡಿದ್ದಾರೆ.


ಈ ಬಗ್ಗೆ ಮಾತನಾಡಿದ ಅಜಂಖಾನ್ ಅವರು,’ ತಾಜ್ ಮಹಲ್ ನಿಜಕ್ಕೂ ಶಿವನ ಮಂದಿರವೇ ಆಗಿದ್ದರೆ ಅದನ್ನು ಖಂಡಿತಾ ಕೆಡವಬೇಕು. ಅದರ ಮೊದಲ ಇಟ್ಟಿಗೆಯನ್ನು ಯೋಗಿ ಆದಿತ್ಯನಾಥ್ ಕಿತ್ತು ಹಾಕಿದರೆ, ಎರಡನೇ ಇಟ್ಟಿಗೆಯನ್ನು ನಾನು ಕಿತ್ತು ಹಾಕುತ್ತೇನೆ. ಈ ತಾಜ್ ಮಹಲ್ ಅನ್ನು ಕೆಡವಲು ನನ್ನೊಂದಿಗೆ 10 ರಿಂದ 20 ಸಾವಿರ ಮುಸ್ಲಿಮರನ್ನು ಕರೆತರುತ್ತೇನೆ’ ಎಂದು ಹೇಳುವುದರ ಮೂಲಕ ವ್ಯಂಗ್ಯವಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ