ಪತಿಯನ್ನು ರಕ್ಷಿಸಲು ಹೋಗಿ ಪೊಲೀಸರ ಅತಿಥಿಯಾದ ಪತ್ನಿ

ಶನಿವಾರ, 25 ಡಿಸೆಂಬರ್ 2021 (07:40 IST)
ಹೈದರಾಬಾದ್: ಪೊಲೀಸರ ವಶವಾಗುತ್ತಿದ್ದ ಪತಿಯನ್ನು ಬಚಾವ್ ಮಾಡಲು ಪತ್ನಿ ಪೊಲೀಸರಿಗೆ ಖಾರದ ಪುಡಿ ಎರಚಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಈ ಸಂಬಂಧ ಮಹಿಳೆಯನ್ನು ಬಂಧಿಸಲಾಗಿದೆ. ಕೊಲೆ ಪ್ರಕರಣವೊಂದರಲ್ಲಿ ಪೊಲೀಸರು ಪತಿಯನ್ನು ಬಂಧಿಸಲು ಬಂದಿದ್ದರು. ಈ ವೇಳೆ ಪತಿಯನ್ನು ರಕ್ಷಿಸಲು ಪೊಲೀಸ್ ತಂಡದ ಮೇಲೆ ಮಹಿಳೆ ಖಾರದ ಪುಡಿ ಎರಚಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಳೆ.

ಖಾರದ ಪುಡಿ ಎರಚಿದ್ದಲ್ಲದೆ ಕೂಗಾಡಿ ನೆರೆಹೊರೆಯವರನ್ನೆಲ್ಲಾ ಕರೆದಿದ್ದಾಳೆ. ಇದರಿಂದಾಗಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಹೀಗಾಗಿ ಮಹಿಳೆಯನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ