ಸಂಬಂಧಿಕರ ಜೊತೆಗೂಡಿ ಗಂಡನ ಕತೆ ಮುಗಿಸಿದ ಪತ್ನಿ

ಸೋಮವಾರ, 30 ಆಗಸ್ಟ್ 2021 (12:08 IST)
ಜೈಪುರ: ಗಂಡನಿಗೆ ಅಕ್ರಮ ಸಂಬಂಧವಿದೆಯೆಂದು ಅನುಮಾನ ಪಟ್ಟ ಮಹಿಳೆಯೊಬ್ಬಳು ಸಂಬಂಧಿಕರ ಸಹಾಯದಿಂದ ಆತನ ಜೀವವನ್ನೇ ತೆಗೆದ ಧಾರುಣ ಘಟನೆ ರಾಜ್ಥಾನ್ ನಲ್ಲಿ ನಡೆದಿದೆ.


ಇದೀಗ ಮಹಿಳೆಯನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಸಹಾಯ ಮಾಡಿದವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. 49 ವರ್ಷದ ಪತಿ ಹತ್ಯೆಗೀಡಾಗಿದ್ದಾನೆ.

ಮನೆಗೇ ಬಂದ ಪತ್ನಿಯ ಸಂಬಂಧಿಕರು ಗಂಡನ ಗಂಟಲು ಸೀಳಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರಿಗೆ ಪತಿ-ಪತ್ನಿಯರ ಸಂಬಂಧ ಚೆನ್ನಾಗಿರಲಿಲ್ಲವೆಂದು ಗೊತ್ತಾಗುತ್ತದೆ. ಈ ಹಿನ್ನಲೆಯಲ್ಲಿ ತನಿಖೆ ನಡೆಸಿದಾಗ ಪತ್ನಿಯೇ ಕೃತ್ಯಕ್ಕೆ ಸಹಕರಿಸಿರುವುದು ಬೆಳಕಿಗೆ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ