ತವರಿಗೆ ಹೋದ ಪತ್ನಿ : ಬೇರೆಯವಳ ಜೊತೆ ಮಜಾ ಮಾಡಿದ ಗಂಡ ಮಾಡಿದ್ದೇನು?
ಸೋಮವಾರ, 10 ಆಗಸ್ಟ್ 2020 (19:04 IST)
ತನ್ನ ಪತ್ನಿ ತವರಿಗೆ ಹೋಗಿದ್ದೇ ತಡ ಬೇರೊಬ್ಬಳನ್ನು ಕರೆದುಕೊಂಡು ಬಂದು ಸಖತ್ ಆಗಿ ಮಜಾ ಮಾಡಿದ ಗಂಡ ಕೊನೆಗೆ ಮಾಡಬಾರದ್ದನ್ನು ಮಾಡಿದ್ದಾನೆ.
ಮಕ್ಕಳನ್ನು ಕರೆದುಕೊಂಡು ಪತ್ನಿ ಊರಿಗೆ ಹೋಗಿದ್ದಾಳೆ. ಇದೇ ಛಾನ್ಸು ಎಂದುಕೊಂಡ ಚಾಲಕ ವೃತ್ತಿ ಮಾಡುತ್ತಿದ್ದ ಗಂಡ ಅಂಜಯ್ಯ ಎಂಬಾತ ಬೇರೊಬ್ಬಳನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ.
ತಡರಾತ್ರಿವರೆಗೂ ಮದ್ಯ ಕುಡಿದು ಮಜಾ ಮಾಡಿದ್ದಾರೆ. ಆಗ ವಾಗ್ವಾದ ನಡೆದಿದ್ದು, ಮಹಿಳೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಹೈದ್ರಾಬಾದ್ ನ ಉಪ್ಪಲ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.