ಹೆಂಡತಿಗೆ ಹೊಡೆದು ಬಡಿದು ಐದು ಲಕ್ಷಕ್ಕೆ ಬೇಡಿಕೆಯಿಟ್ಟ ಪತಿ
ಕೆನಡಾಗೆ ತೆರಳಲು ವರ್ಕಿಂಗ್ ವೀಸಾ ಪಡೆಯಲು ಪತಿಗೆ ಹಣ ಬೇಕಾಗಿತ್ತು. ಇತ್ತೀಚೆಗೆ ಮದ್ಯಪಾನವನ್ನೂ ಅಭ್ಯಾಸ ಮಾಡಿಕೊಂಡಿದ್ದ ಈತ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ.
ಇದೇ ರೀತಿ ಕುಡಿದ ಮತ್ತಿನಲ್ಲಿ ಚೆನ್ನಾಗಿ ಥಳಿಸಿ ತವರು ಮನೆಯಿಂದ ವೀಸಾಗೆ ಹೊಂದಿಸಲು ಐದು ಲಕ್ಷ ರೂ. ತರುವಂತೆ ಹೇಳಿ ಮನೆಯಿಂದ ಹೊರಹಾಕಿದ್ದಾನೆ. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಇದೀಗ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪತಿಯನ್ನು ಬಂಧಿಸಿದ್ದಾರೆ.