ಇದೊಂದು ಆತ್ಮಹತ್ಯೆಯ ವಿಶಿಷ್ಠ ಪ್ರಸಂಗವೆನಿಸಿಕೊಂಡಿದೆ. ಪತ್ನಿಯು ಪ್ರಿಯಕರನ ಜತೆ ಓಡಿಹೋದ ಕಾರಣಕ್ಕಾಗಿ ಚಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ ಚಾಲಕ ಆತ್ಮಹತ್ಯೆಗೆ ಮುಂಚೆ ರೆಡಿಮಾಡಿಟ್ಟ ವಿಡಿಯೋದಿಂದ ಪತ್ನಿ, ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಆ ವಿಡಿಯೋದಲ್ಲಿ ತನ್ನ ಪತ್ನಿ, ಅವಳ ಪ್ರಿಯಕರ ಮತ್ತು ಪೊಲೀಸರೊಬ್ಬರು ನನ್ನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ದೂರಿದ್ದಾನೆ. ಮಧ್ಯಮುಂಬೈನ ಅಗ್ರಿಪಾದಾದ ಗುಡಿಸಿಲಿನಲ್ಲಿ ಚಾಲಕನು ನೇಣು ಹಾಕಿಕೊಂಡು ಸತ್ತಿದ್ದನ್ನು ಚಾಲಕನ ತಾಯಿ ನೋಡಿದರು. ಮರಾಠಿಯಲ್ಲಿ ಒಂದು ಪತ್ರವೊಂದನ್ನು ಚಾಲಕ ಬರೆದಿಟ್ಟು, ವಿಡಿಯೋ ಚೆಕ್ ಮಾಡುವಂತೆ ತಿಳಿಸಿದ್ದ.