ಯುವತಿಯನ್ನು ಅಪಹರಿಸಿ, ರೇಪ್ ಎಸಗಿದ್ದವನಿಗೆ ತಕ್ಕ ಶಿಕ್ಷೆ ನೀಡಿದ ಕೋರ್ಟ್

ಬುಧವಾರ, 29 ನವೆಂಬರ್ 2023 (12:11 IST)
ಮಹಿಳಾ ಉದ್ಯೋಗಿಯನ್ನು ಅಪಹರಿಸಿ, ಅತ್ಯಾಚಾರವೆಸಗಿದ್ದ ಆರೋಪಿ 32 ವರ್ಷ ವಯಸ್ಸಿನ ಚಾಲಕನಿಗೆ  ಹೆಚ್ಚುವರಿ ನ್ಯಾಯಮೂರ್ತಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. 

ಆರೋಪಿ ಚಾಲಕನಿಗೆ ಶಿಕ್ಷೆಯ ಜೊತೆಗೆ  21 ಸಾವಿರ ರೂಪಾಯಿಗಳ ದಂಡ ಹೇರಿದ್ದು, ದಂಡದ ಮೊತ್ತವನ್ನು ಅತ್ಯಾಚಾರಕ್ಕೊಳಗಾದ ಮಹಿಳೆಗೆ ನೀಡುವಂತೆ ದೆಹಲಿ ಲೀಗಲ್ ಸರ್ವಿಸ್ ಅಥಾರಿಟಿಗೆ ಕೋರ್ಟ್ ಆದೇಶ ನೀಡಿದೆ.
 
ಕಳೆದ 11 ತಿಂಗಳ ಹಿಂದೆ ಮಹಿಳಾ ಉದ್ಯೋಗಿಯ ಮೇಲೆ ಅತ್ಯಾಚಾರವೆಸಗಿದ್ದ ಚಾಲಕನಿಗೆ ದೆಹಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. 25 ವರ್ಷದ ಮಹಿಳಾ ಉದ್ಯೋಗಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗಾಯಗೊಳಿಸಿದ ಆರೋಪದ ಮೇಲೆ  ಕೋರ್ಟ್ ಗರಿಷ್ಠ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
 
ನ್ಯಾಯಮೂರ್ತಿಗಳು ಶಿಕ್ಷೆ ಘೋಷಿಸುತ್ತಿದ್ದಂತೆ ಆರೋಪಿ ಮತ್ತು ಆತನ ಪತ್ನಿ, ತಂದೆ ಹಾಗೂ ಇಬ್ಬರು ಅಪ್ರಾಪ್ತ ಬಾಲಕಿಯರು ನಿರಂತರವಾಗಿ ಕಣ್ಣೀರು ಸುರಿಸಲು ಆರಂಭಿಸಿದರು ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ