ಮನೆಕೆಲಸದಾಕೆಯನ್ನು ಮೂರನೇ ಮಹಡಿಯಿಂದ ತಳ್ಳಿದ ಮಾಲಕಿ ಅರೆಸ್ಟ್

ಗುರುವಾರ, 28 ಏಪ್ರಿಲ್ 2022 (09:00 IST)
ಗುವಾಹಟಿ: ಮನೆ ಕೆಲಸಕ್ಕಿಟ್ಟುಕೊಂಡಿದ್ದ ಅಪ್ರಾಪ್ತ ಬಾಲಕಿಯನ್ನು ಮೂರನೇ ಮಹಡಿಯಿಂದ ತಳ್ಳಿ ಗಾಯಗೊಳಿಸಿದ್ದಕ್ಕೆ ಮನೆ ಮಾಲಕಿಯನ್ನು ಬಂಧಿಸಲಾಗಿದೆ.

ಕೆಲಸದ ವಿಚಾರವಾಗಿ ಬಾಲಕಿ ಮೇಲೆ ಆಕ್ರೋಶಗೊಂಡಿದ್ದ ಮಾಲಕಿ ಆಕೆಯನ್ನು ಮಹಡಿಯಿಂದ ತಳ್ಳಿದ್ದರಿಂದ ಕೈ ಮುರಿತಕ್ಕೊಳಗಾಗಿತ್ತು.

ಈ ಸಂಬಂಧ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಮಾಲಕಿಯ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ