ಗಂಡನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ ಪತ್ನಿಗೆ 10 ಸಾವಿರ ದಂಡ
ಮದುವೆಗೆ ಮೊದಲು ಪತಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದ. ಮೊದಲು ಆತ ಮದುವೆಗೆ ನಿರಾಕರಿಸಿದ್ದ. ಬಳಿಕ ಮದುವೆಯಾಗಿದ್ದ ಎಂದು ಮೊದಲು ಆತನ ವಿರುದ್ಧ ಮಹಿಳೆ ದೂರು ನೀಡಿದ್ದಳು.
ಇದನ್ನು ಪ್ರಶ್ನಿಸಿ ಪತಿ ಕೋರ್ಟ್ ಮೆಟ್ಟಿಲೇರಿದ್ದ. ವಿಚಾರಣೆ ಸಂದರ್ಭದಲ್ಲಿ ಮಹಿಳೆ ತಮ್ಮಿಬ್ಬರನ್ನು ದೂರ ಮಾಡಲು ಯಾರೋ ಪಿತೂರಿ ನಡೆಸಿದ್ದಾರೆ. ತನಗೂ ಗಂಡನೆಂದರೆ ಇಷ್ಟ ಎಂದು ಕೇಸ್ ವಾಪಸ್ ಪಡೆಯಲು ಮುಂದಾಗಿದ್ದಳು. ಹೀಗಾಗಿ ಕೋರ್ಟ್ ಸಮಯ ಹಾಳು ಮಾಡಿದ ಕಾರಣಕ್ಕೆ ಆಕೆಗೆ 10 ಸಾವಿರ ರೂ. ದಂಡ ವಿಧಿಸಲಾಗಿದೆ.