ನಕಲಿ ದಾಖಲೆ ಒದಗಿಸಿ ಬ್ಯಾಂಕ್ ಗೆ 19 ಕೋಟಿ ಪಂಗನಾಮ ಹಾಕಿದ ಮಹಿಳೆ!
ಗುರ್ಗಾಂವ್ ನಿವಾಸಿಯಾಗಿರುವ 66 ವರ್ಷದ ಮಹಿಳೆ ಬಂಧಿತೆ. ಎಚ್ ಎಸ್ ಬಿಸಿ ಬ್ಯಾಂಕ್ ಗೆ ಈಕೆ ವಂಚಿಸಿದ್ದಾಳೆ. ಕಂಪನಿಯೊಂದರ ಹೆಸರು ಹೇಳಿಕೊಂಡು ಅದರ ಅಧಿಕಾರಿಗಳೆಂದು ಇನ್ನೊಬ್ಬರ ಜೊತೆ ಬ್ಯಾಂಕ್ ಗೆ ಬಂದಿದ್ದ ಮಹಿಳೆ 19 ಕೋಟಿ ಕ್ರೆಡಿಟ್ ಸೌಲಭ್ಯಕ್ಕೆ ಮನವಿ ಮಾಡಿದ್ದಳು.
ಆಕೆ ನೀಡಿದ ದಾಖಲೆಗಳನ್ನು ನಂಬಿ ಬ್ಯಾಂಕ್ ಆಕೆಗೆ 19 ಕೋಟಿ ಕ್ರೆಡಿಟ್ ಸೌಲಭ್ಯ ನೀಡಿದ್ದರು. ಇದಾದ ಬಳಿಕ ಈಕೆಯ ವಂಚನೆ ಬೆಳಕಿಗೆ ಬಂದಿತ್ತು.